ಗುರುವಾರ , ಫೆಬ್ರವರಿ 20, 2020
19 °C

ಎನ್‌ಎಸ್‌ಜಿ ಪಡೆಗೆ ಮುಧೋಳ ತಳಿ ನಾಯಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ದೇಶದಲ್ಲಿ ಅತಿ ಗಣ್ಯರಿಗೆ ಭದ್ರತೆಯ ಹೊಣೆ ಹೊತ್ತಿರುವ ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ಪಡೆ) ಪಡೆಯ ಶ್ವಾನ ದಳಕ್ಕೆ ನಮ್ಮ ಮುಧೋಳ ತಳಿ ನಾಯಿ ಆಯ್ಕೆಯಾಗಿದೆ.

ಈಗಾಗಲೇ ಮುಧೋಳ ತಳಿ ನಾಯಿಗಳು ಭಾರತೀಯ ಸೇನೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹಾಗೂ ಇಂಡೊ–ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯ ಭಾಗವಾಗಿವೆ. ಇದೀಗ ದೇಶದ ಅತ್ಯುನ್ನತ ಭದ್ರತಾ ಸಂಸ್ಥೆಯ ಶ್ವಾನ ದಳದಲ್ಲೂ ಸ್ಥಾನ ದೊರೆತಂತಾಗಿದೆ.

’ನಾಲ್ಕು ಮರಿಗಳಿಗೆ ಬೇಡಿಕೆ ಬಂದಿದೆ. ಇನ್ನೊಂದು ವಾರದಲ್ಲಿ ದೆಹಲಿಯಿಂದ ಎನ್‌ಎಸ್‌ಜಿ ಪಡೆಯ ಹಿರಿಯ ಅಧಿಕಾರಿಗಳು ಇಲ್ಲಿಗೆ ಬಂದು ಕೊಂಡೊಯ್ಯಲಿದ್ದಾರೆ‘ ಎಂದು ಮುಧೋಳ ತಾಲ್ಲೂಕಿನ ತಿಮ್ಮಾಪುರದಲ್ಲಿರುವ ಮುಧೋಳ ಶ್ವಾನ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಡಾ.ಮಹೇಶ ದೊಡಮನಿ ಹೇಳುತ್ತಾರೆ.

ಸದ್ಯ ಕೇಂದ್ರದಲ್ಲಿ 45 ನಾಯಿ ಮರಿಗಳಿವೆ. ಅವುಗಳಲ್ಲಿ ಸೂಕ್ತ ಮರಿಗಳನ್ನು ಎನ್ಎಸ್‌ಜಿ ಅಧಿಕಾರಿಗಳೇ, ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು