ಬಾಗಲಕೋಟೆ: ಗಾಯಕ ಮ್ಯೂಸಿಕ್ ಮೈಲಾರಿ ವಿರುದ್ಧ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

‘ಚಿಕ್ಕೋಡಿ ತಾಲ್ಲೂಕಿನ ಜಾಗನೂರ ಗ್ರಾಮದಲ್ಲಿ ಜಾತ್ರೆಯಲ್ಲಿ ಡ್ಯಾನ್ಸ್ ಮಾಡಲು ಬಾಲಕಿಯನ್ನು, ಮೈಲಾರಿ ಕರೆದೊಯ್ದಿದ್ದರು. ವಾಪಸ್ ಬಾಲಕಿಯನ್ನು ಊರಿಗೆ ಕರೆದೊಯ್ಯಲು ಮಹಾಲಿಂಗಪುರ ಲಾಡ್ಜ್ನಲ್ಲಿ ಉಳಿದಾಗ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ದೂರು ದಾಖಲಾಗಿದೆ.

‘ನೃತ್ಯ ಕಾರ್ಯಕ್ರಮಗಳಿಗೆ ಕಳುಹಿಸುತ್ತೇನೆ. ಕಾರ್ಯಕ್ರಮಗಳಲ್ಲಿ ಅವಕಾಶ ನೀಡುತ್ತೇನೆ’ ಎಂದು ಮೈಲಾರಿ ಹೇಳಿದಾಗ, ಆಕೆ ಒಪ್ಪಲಿಲ್ಲ. ಬೆಳಿಗ್ಗೆ ಬಾಲಕಿ ಸಂಭಾವನೆ ಕೇಳಿದಾಗ, ಮೈಲಾರಿ ಕಾರಿನ ಡ್ರೈವರ್, ವಿಷಯ ಯಾರಿಗೂ ಹೇಳದಂತೆ ಧಮಕಿ ಹಾಕಿದ್ದಾನೆ. ನಂತರ ಮೈಲಾರಿಯೂ, ನಿನ್ನೆ ವಿಡಿಯೊ ಮಾಡಿಕೊಂಡಿದ್ದೇನೆ. ಹೊರಗಡೆ ಹೇಳಿದರೆ ವಿಡಿಯೊ ವೈರಲ್ ಮಾಡುತ್ತೇನೆ ಎಂದು ಹೆದರಿಸಿದ್ದಾನೆ ಎಂದು’ ದೂರಲಾಗಿದೆ.

‘ಅಕ್ಟೋಬರ್ 24ರಂದು ಘಟನೆ ನಡೆದಿದ್ದು, ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಹಾಲಿಂಗಪುರ ಠಾಣೆಗೆ ವರ್ಗಾಯಿಸಲಾಗಿದೆ. ಕಾನೂನಿನ ಪ್ರಕಾರ ತ್ವರಿತವಾಗಿ ಕ್ರಮಕೈಗೊಳ್ಳಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸುಂಬೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.