ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಪುರ ಗ್ರಾಮದ ಗುಡ್ಡದಲ್ಲಿ ಯಾವುದೇ ಟೆಂಟ್ ಇಲ್ಲ: ಪಿಎಸ್ಐ ವಿಠ್ಠಲ ನಾಯಕ

Published : 11 ಸೆಪ್ಟೆಂಬರ್ 2024, 15:36 IST
Last Updated : 11 ಸೆಪ್ಟೆಂಬರ್ 2024, 15:36 IST
ಫಾಲೋ ಮಾಡಿ
Comments

ಬಾದಾಮಿ: ‘ಬನಶಂಕರಿ ಸಮೀಪದ ಶಿವಪುರ ಗ್ರಾಮದ ಗುಡ್ಡದಲ್ಲಿ ಜೂಜಾಟದ ಯಾವುದೇ ಟೆಂಟ್ ಕಂಡುಬರಲಿಲ್ಲ’ ಎಂದು ಪಿಎಸ್ಐ ವಿಠ್ಠಲ ನಾಯಕ ಸ್ಪಷ್ಟಪಡಿಸಿದರು.

ಶಿವಪುರ ಗ್ರಾಮದ ಗುಡ್ಡದಲ್ಲಿ ಜೂಜಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಪತ್ರಿಕೆಯಲ್ಲಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಆದೇಶದ ಮೇರೆಗೆ ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಿಗ್ಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗುಡ್ಡವನ್ನು ಸುತ್ತು ಹಾಕಲಾಗಿ ಯಾವುದೇ ಟೆಂಟ್ ಕಂಡು ಬರಲಿಲ್ಲ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಂದಿರುವುದು ಹಳೇ ವಿಡಿಯೊ ಇದ್ದಿರಬಹುದು. ಹಳೇ ವಿಡಿಯೊ ಯಾರೋ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟ ಬಗ್ಗೆ ಪತ್ತೆ ಮಾಡುವುದಾಗಿ ಪಿಎಸ್ಐ ತಿಳಿಸಿದರು.

ಗುಡ್ಡದಲ್ಲಿ ಜೂಜಾಟದ ಬಗ್ಗೆ ಗ್ರಾಮದಲ್ಲಿ 15 ದಿನಗಳ ಹಿಂದೆ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಚಟುವಟಿಕೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿದೆ ಎಂದು ಸಿಪಿಐ ಕರಿಯಪ್ಪ ಬನ್ನೆ ಪ್ರತಿಕ್ರಿಯಿಸಿದರು.

ಗಣೇಶ ಹಬ್ಬ ಮುಗಿದ ಮೇಲೆ ಗ್ರಾಮದಲ್ಲಿ ಹೊರ ಪೊಲೀಸ್ ಠಾಣೆ ಸ್ಥಾಪಿಸಿ ನಿಗಾ ಇಡುವುದಾಗಿ ಪೊಲೀಸ್ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT