ಬುಧವಾರ, ಜುಲೈ 6, 2022
21 °C
ಸಂವಿಧಾನದ ಉಳಿವಿಗೆ ಜನಜಾಗೃತಿ ವಿಚಾರ ಸಂಕಿರಣ

‘ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ’-ಡಾ.ಎ.ಆರ್‌.ಬೆಳಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಬಕವಿ ಬನಹಟ್ಟಿ: ಭಾರತ ದೇಶದ ಸಂವಿಧಾನ ಕೇವಲ ದಲಿತರಿಗೆ ಮಾತ್ರ ಸಿಮೀತವಾಗಿಲ್ಲ. ಅದು ದೇಶದ ಎಲ್ಲ ನಾಗರಿಕರಿಗೆ ಸಮಾನವಾಗಿ ಬದುಕುವ ಅವಕಾಶವನ್ನು ನೀಡಿದೆ ಎಂದು ಮಹಾಲಿಂಗಪುರದ ಡಾ.ಎ.ಆರ್‌.ಬೆಳಗಲಿ ತಿಳಿಸಿದರು.

ಅವರು ಗುರುವಾರ ಸ್ಥಳೀಯ ಸಿದ್ಧರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಸಂವಿಧಾನದ ಉಳಿವಿಗಾಗಿ ಜನಜಾಗೃತಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಧರ್ಮಣ್ಣ ಕಾಂಬಳೆ ಮಾತನಾಡಿ, ನಾವು ಸಂವಿಧಾನವನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಪ್ರತಿಯೊಬ್ಬ ಭಾರತೀಯರು ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟ ಸಂವಿಧಾನವನ್ನು ಗೌರವಿಸಬೇಕು ಮತ್ತು ಅದರ ಆಶಯದಂತೆ ನಡೆದುಕೊಳ‍್ಳಬೇಕು. ಸಂವಿಧಾನ ರಕ್ಷಣೆಯಲ್ಲಿ ಮಹಿಳೆಯರ ಪಾತ್ರವೂ ಕೂಡಾ ಮುಖ್ಯವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನದ ಪಾತ್ರ ಬಹಳಷ್ಟು ಮುಖ್ಯವಾಗಿದೆ. ಇಂದಿನ ದಿನಗಳಲ್ಲಿ ಸಂವಿಧಾನದ ಅರಿವನ್ನು ನಾವು ಪ್ರತಿಯೊಬ್ಬರಲ್ಲಿ ಬಿತ್ತಬೇಕಾಗಿದೆ ಎಂದರು.

ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಪರಶುರಾಮ ಕಾಂಬಳೆ, ರಬಕವಿ ಬನಹಟ್ಟಿ ತಾಲ್ಲೂಕಿನ ಸಂಚಾಲಕ ಬಸವರಾಜ ದೊಡಮನಿ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ್. ವಕೀಲ ಶಶಿಕಾಂತ ದೊಡಮನಿ ಮಾತನಾಡಿದರು. ಮಹೇಶ ಗೊಂಬಿಗುಡ್ಡ, ಬಸವರಾಜ ಹಳ್ಳದಮನಿ, ರಮೇಶ ಅನಗವಾಡಿ, ಬಸವರಾಜ ಪಾತ್ರೋಟ, ಕಾಶೀಂಅಲಿ ಗೋಠೆ, ಎಚ್.ಎನ್.ನೀಲನಾಯಕ, ಸದಾಶಿವ ಐನಾಪುರ, ಮುತ್ತು ಹರಿಜನ, ಯಲ್ಲಪ್ಪ ಕಾಂಬಳೆ, ವಿಠ್ಠಲ ಸಿಂಗೆ, ರಾಜು ಪೋಳ, ರಮೇಶ ಮಾಂಗ, ಪರಸು ಕಾಂಬಳೆ, ಸೇರಿದಂತೆ ಅನೇಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು