‘ತಮ್ಮ ಅಧ್ಯಕ್ಷತೆಯಲ್ಲಿ ಇರುವ ಶಾಲೆ ಹಾಗೂ ಶಿವಾನಂದ ಮಠ ಸಾರ್ವಜನಿಕ ಮಠವಾಗಿರುವುದರಿಂದ ಗ್ರಾಮದ ಎಲ್ಲ ಜಾತಿ ಜನಾಂಗದವರಿಗೆ ಪ್ರವೇಶ ನೀಡುವುದು ತಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಮಠದ ಪೀಠಾಧಿ ಪತಿಗಳಾಗಿ ಜಾತಿ ತಾರತಮ್ಯ ತೊಲಗಿಸುವ ಕೆಲಸ ಮಾಡದೇ ಇರುವ ಕುರಿತು ಬಂದಿರುವ ಆರೋಪಗಳಿಗೆ ತಾವು ಒಂದು ವಾರದ ಒಳಗೆ ವಿವರಣೆಯನ್ನು ಕಾರ್ಯಾಲಯಕ್ಕೆ ಸಲ್ಲಿಸಬೇಕು’ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.