ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ: ಹಿಂದೂ ಮನೆಯಲ್ಲಿ ಪಂಜಾ ಪ್ರತಿಷ್ಠಾಪನೆ

ಮೊಹರಂ ಆಚರಣೆ ಮುಗಿದ 3 ದಿನಗಳ ನಂತರ ‘ಕೌಡಿಪೀರಾ’ ದೇವರ ಪ್ರತಿಷ್ಠಾಪನೆ
Published : 6 ಆಗಸ್ಟ್ 2023, 5:39 IST
Last Updated : 6 ಆಗಸ್ಟ್ 2023, 5:39 IST
ಫಾಲೋ ಮಾಡಿ
Comments

ಎಸ್.ಎಂ. ಹಿರೇಮಠ

ಬಾದಾಮಿ: ಪಟ್ಟಣದ ಕಲಾಲ್ ಬಡಾವಣೆಯ ಹಿಂದೂ ಸೂರ್ಯವಂಶ ಕ್ಷತ್ರಿಯ ಕಾಟಿಕ್ ಸಮಾಜದ ಮುಖಂಡ ಅಶೋಕ ಕೋಟನಕರ ಮನೆ ಮುಂದೆ  ‘ಕೌಡಿಪೀರಾ’ ಪಂಜಾ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಪ್ರತಿವರ್ಷ ಮೊಹರಂ ಆಚರಣೆ ಮುಗಿದು ಮೂರು ದಿನಗಳ ನಂತರ ‘ಕೌಡಿಪೀರಾ’ ದೇವರನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಕಲಾಲ್ ಕುಟುಂಬದ ಹಿರಿಯ ಅಶೋಕ ಕೋಟನಕರ ಹೇಳಿದರು.

‘ಕೌಡಿಪೀರಾ’ ಪಂಜಾ ದೇವರು ಎರಡು ಶತಮಾನಗಳ ಹಿಂದೆ ಬಳ್ಳಾರಿಯಿಂದ ಬಾದಾಮಿಗೆ ಬಂದಿದೆ. ನಮ್ಮ ಪೂರ್ವಜರು ಬಳ್ಳಾರಿಯಲ್ಲಿ ದೇವರನ್ನು ಇಟ್ಟು ಪೂಜಿಸುತ್ತಿದ್ದರು. ಕಲಾಲ್ ಕುಟುಂಬ ಬಾದಾಮಿಗೆ ಬಂದ ನಂತರ ಇಲ್ಲಿಯೇ ಪ್ರತಿಷ್ಠಾಪಿಸಲಾಗುತ್ತಿದೆ ಎಂದರು.

ಅಂದಾಜು ಎರಡು ಶತಮಾನಗಳ ಹಿಂದೆ ಪಟ್ಟಣದಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ತಯಾರಕರಾದ ನಿಂಗಪ್ಪ ಶೀಲವಂತರ ಪಂಚಲೋಹದಲ್ಲಿ ಪಂಜಾವನ್ನು ರೂಪಿಸಿ ಮಧ್ಯದಲ್ಲಿ ಓಂ ಎಂದು ಸಂಕೇತ ಮಾಡಿದ್ದಾರೆ.

ಎರಡು ತಲೆಮಾರಿನ ಹಿರಿಯರಾಗಿದ್ದ ಶೇರಾಜಿ ಕೋಟನಕರ, ಮಹಾಬಣ್ಣ ಕೋಟನಕರ ದೇವರ ಕುದುರೆಯಾಗಿ ಸೇವೆ ಮಾಡಿದ್ದಾರೆ. ಈಗ ನೇತಾಜಿ ಕೋಟನಕರ ದೇವರನ್ನು ಹೊತ್ತು ಭಕ್ತರ ಮನೆ ಮನೆಗೆ ತೆರಳುವ ವಾಡಿಕೆ ಇದೆ ಎಂದು ತಿಳಿಸಿದರು.

ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಕೌಡಿಪೀರಾ ಪಂಜಾ ದೇವರಿಗೆ ಶ್ರದ್ಧೆ, ಭಕ್ತಿಯಿಂದ ಪುಷ್ಪಮಾಲೆ, ಸಕ್ಕರೆ, ಮಕನಾ ಮತ್ತಿತರ ವಸ್ತುಗಳಿಂದ ಪೂಜೆಯನ್ನು ಸಲ್ಲಿಸುವರು.

ಕೌಡಿಪೀರಾ ದೇವರು ನಮ್ಮ ಮನೆತನದ ಕಷ್ಟಗಳನ್ನು ದೂರ ಮಾಡಿದ್ದಾನೆ. ಬಳ್ಳಾರಿ ಹೊಸಪೇಟೆ ದಾಂಡೇಲಿ ಬಾಗಲಕೋಟೆ ಮತ್ತು ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುವರು ಅ
ಶೋಕ ಕೋಟನಕರ ಕಲಾಲ್ ಕುಟುಂಬಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT