ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಬಿಸಿಲಿನಿಂದ ರಕ್ಷಣೆಗೆ ರಸ್ತೆ ತುಂಬ ಪ್ಲಾಸ್ಟಿಕ್ ಹೊದಿಕೆ

Published 2 ಮೇ 2024, 13:30 IST
Last Updated 2 ಮೇ 2024, 13:30 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಿದ್ದರಿಂದ ಇಲ್ಲಿನ ಮಂಗಳವಾರ ಪೇಟೆಯಲ್ಲಿ ಹೂವಿನ ವ್ಯಾಪಾರಿಗಳು ಅವುಗಳ ರಕ್ಷಣೆಗಾಗಿ ಪ್ಲಾಸ್ಟಿಕ್‌ ಹೊದಿಕೆಗಳ ಮೊರೆ ಹೋಗಿದ್ದಾರೆ.

‘ಒಂದು ತಿಂಗಳಿಗಿಂತ ಹೆಚ್ಚು ಕಾಲ ಬಿಸಿಲಿನ ಬೇಗೆಯಿರುವುದರಿಂದ ಹೂ ಮತ್ತು ಹೂಮಾಲೆಗಳ ವ್ಯಾಪಾರ ಮಾಡುವುದು ಸಮಸ್ಯೆಯಾಗಿದೆ. ಬಹಳಷ್ಟು ಹಾನಿಯನ್ನು ಕೂಡಾ ಅನುಭವಿಸುತ್ತಿದ್ದೇವೆ. ಅಧಿಕ ಬಿಸಿಲಿನ ಪ್ರಮಾಣದಿಂದಾಗಿ ಸಾಕಷ್ಟು ಹಾನಿಯನ್ನು ಕೂಡಾ ಅನುಭವಿಸುತ್ತಿದ್ದೇವೆ. ಹೂ ಮಾಲೆಗಳು ಬಾಡುತ್ತಿವೆ. ಆದ್ದರಿಂದ ಅಂಗಡಿಗಳ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಕಿದ್ದೇವೆ. ದಾವಣಗೇರಿ ಮತ್ತು ಬೆಂಗಳೂರುಗಳಿಂದ ಹೂ ಮತ್ತು ಹೂಮಾಲೆಗಳನ್ನು ತರಿಸಿಕೊಳ್ಳುತ್ತಿದ್ಧೇವೆ’ ಎನ್ನುತ್ತಾರೆ ಇಲ್ಲಿನ ಹೂ ವ್ಯಾಪಾರಸ್ಥ ಮಹಾಂತೇಶ ಹೂಗಾರ.

ಹೂ ವ್ಯಾಪಾರಿಗಳು ಪ್ರಮುಖ ಬೀದಿಯಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದು ಸಾರ್ವಜನಿಕರಿಗೂ ಅನುಕೂಲವಾಗಿದೆ. ಇದರಿಂದ ಜನರು ಕೆಲ ಸಮಯ ನೆರಳಿಯಲ್ಲಿ ನಡೆದುಕೊಂಡು ಹೋಗುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT