ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಬಾಗಲಕೋಟೆಯ ಡಾ.ಚಂದ್ರಕಾಂತ ಜವಳಿ

ಕೋವಿಡ್ ಚಿಕಿತ್ಸಾ ತಂಡ ಮುನ್ನಡೆಸಿದ ಡಾ.ಜವಳಿ
Last Updated 31 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಕೊರೊನಾ ನಮ್ಮ ಎಣಿಕೆಯಷ್ಟು ಅಪಾಯಕಾರಿ ಅಲ್ಲ, ನಿರ್ಲಕ್ಷಿಸಬಹುದಾದ ವೈರಾಣುವೂ ಅಲ್ಲ.ವ್ಯಕ್ತಿಯಿಂದ ವ್ಯಕ್ತಿಗೆ ಅದು ಭಿನ್ನವಾಗಿ ವರ್ತಿಸುವ ಕಾರಣಅದು ಹೀಗೆಯೇ ಎಂದು ಅಂದಾಜಿಸಲು ಸಾಧ್ಯವಾಗುವುದಿಲ್ಲ. ಚಿಕಿತ್ಸೆಯ ವೇಳೆ ಅದೇ ನಮಗೆ ಎದುರಾಗುವ ದೊಡ್ಡ ಸವಾಲು

ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ತಂಡವನ್ನು ಮುನ್ನಡೆಸುತ್ತಿರುವ ನಾನು ಈ ವರೆಗೆ 3,400 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದೇನೆ. ತೀರಾ ಹುಷಾರು ಆಗೋದೆ ಇಲ್ಲ ಎಂದು ಕೈ ಚೆಲ್ಲಿದ್ದ ಸೋಂಕಿತರು ಬದುಕುಳಿದಿದ್ದಾರೆ. ಇನ್ನು ಏನೂ ತೊಂದರೆ ಇಲ್ಲ. ಆರಾಮವಾಗಲಿದ್ದಾರೆ ಅಂದುಕೊಂಡವರು ದಿಢೀರನೆ ಸಾವಿನಮನೆಯ ಕದತಟ್ಟಿದ್ದಾರೆ.

ಡಾ.ಚಂದ್ರಕಾಂತ ಜವಳಿ
ಡಾ.ಚಂದ್ರಕಾಂತ ಜವಳಿ

ಆರಂಭದ ದಿನಗಳಲ್ಲಿ ಒಂದೇ ಊರಿನಲ್ಲಿ ಇದ್ದರೂ ವಾರಗಟ್ಟಲೇ ಕುಟುಂಬದವರಿಂದ ದೂರ ಇರಬೇಕಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾಗೆ ಮೊದಲ ಸಾವು ಆದಾಗ ಮನೆಯಲ್ಲಿ ಒಂದಷ್ಟು ದುಗುಡ ಪಟ್ಟಿದ್ದು ನಿಜ. ಆದರೆ ಎಲ್ಲವೂ ಅಭ್ಯಾಸವಾಗುತ್ತ ಹೋಯಿತು.

–ಡಾ.ಚಂದ್ರಕಾಂತ ಜವಳಿ, ತಜ್ಞ ವೈದ್ಯ, ಬಾಗಲಕೋಟೆ ಜಿಲ್ಲಾಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT