ರಬಕವಿ ಬನಹಟ್ಟಿ: ರಬಕವಿ ನಗರದ ಬೆಟ್ಟ ಪ್ರದೇಶದ ಮೇಲೆ ಸರ್ವೆ ನಂ. 64/1ಬಿ ಆಶ್ರಯ ಬಡಾವಣೆ ಹತ್ತಿರ ದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಸತಿ ನಿಲಯದ ಕಟ್ಟಡ ಕಾಮಗಾರಿ ಮುಕ್ತಾಯ ವಾಗಿ ಮೂರು ತಿಂಗಳಾದರೂ ಇನ್ನು ಉದ್ಘಾಟನೆಯಾಗಿಲ್ಲ. ₹3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಸತಿ ನಿಲಯ ವಿದ್ಯಾರ್ಥಿಗಳ ಸದ್ಬಳಕೆಗೆ ಲಭ್ಯವಾಗದೆ, ಅನುಪಯುಕ್ತವಾಗಿದೆ.

2021ರ ಜ2.ರಂದು ಕಟ್ಟಡ ಕಾಮಗಾರಿಗೆ ನಿವೇಶನ ಹಸ್ತಾಂತರಿಸಲಾ ಗಿತ್ತು. ಕಟ್ಟಡ ಕಾಮಗಾರಿ ಸಂಪೂರ್ಣ ವಾಗಿ ಮುಕ್ತಾಯಗೊಂಡಿದೆ. ಉದ್ಘಾಟನೆ ನಂತರವೂ ಇನ್ನು ಹಲವು ಪತ್ರ ವ್ಯವಹಾರ ಮಾಡಬೇಕಾಗುತ್ತದೆ. ಈ ಕಾರ್ಯವಾಗಬೇಕಾದರೆ ಮತ್ತೆ ಐದಾರು ತಿಂಗಳು ಬೇಕಾಗುತ್ತದೆ.

‘ಉದ್ಘಾಟನೆ ಕುರಿತು ಕ್ಷೇತ್ರದ ಶಾಸಕ ಸಿದ್ದು ಸವದಿ ಅವರ ಜೊತೆಗೆ ಚರ್ಚೆ ಮಾಡಲಾಗಿದೆ. ಮೇಲಧಿಕಾರಿಗಳಿಗೆ ಪತ್ರ ಬರೆದು ಸರ್ಕಾರದ ಶಿಷ್ಟಾಚಾರ ಮತ್ತು ನಿಯಮಾವಳಿಗಳಂತೆ ಉದ್ಘಾಟನೆ ಮಾಡಲಾಗುವುದು’ ಎಂದು ಕಾಲೇಜು ಪ್ರಾಚಾರ್ಯ ವಿಠ್ಠಲ ಚಿಕ್ಕಲಕಿ ತಿಳಿಸಿದರು.

ದುರಸ್ತಿಯಾಗಬೇಕಿದೆ ಮತ್ತೊಂದು ವಸತಿ ನಿಲಯ: ಈಗಾಗಲೇ 2013-14ನೇ ಸಾಲಿನಲ್ಲಿ ಕಾಲೇಜು ವಿದ್ಯಾರ್ಥಿ ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂದಾಜು ₹1 ಕೋಟಿ ವೆಚ್ಚದಲ್ಲಿ ವಸತಿ ನಿಲಯ ಮಂಜೂರು ಮಾಡಲಾಗಿತ್ತು.

‘ಕಟ್ಟಡ ಕಾಮಗಾರಿ ಮುಕ್ತಾಯ ವಾಗಿ ಒಂದು ವರ್ಷವಾದರೂ ಇನ್ನೂ ಕಾಲೇಜಿಗೆ ಹಸ್ತಾಂತರವಾಗಿಲ್ಲ. ಸದ್ಯ ವಸತಿ ನಿಲಯ ಹಾಳು ಕೊಂಪೆಯಾ ಗಿದೆ. ಹಂದಿ– ನಾಯಿಗಳ ಗೂಡಾ ಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. 2021ರ ಡಿಸೆಂಬರ್ 18ರಂದು ಅಡಿಗಲ್ಲು ಹಾಕಲಾಗಿತ್ತು. 2024ರ ಜ.9ರಂದು ಮತ್ತು 2024ರ ನ. 6ರಂದು ಸಂಬಂಧ ಪಟ್ಟ ಮೇಲಧಿಕಾರಿಗಳಿಗೆ ಕಟ್ಟಡ ಹಸ್ತಾಂತರಿಸುವಂತೆ ಪತ್ರ ವ್ಯವಹಾರ ಮಾಡಲಾಗಿತ್ತು. ಈವರೆಗೆ ಅಧಿಕಾರಿ ಗಳಿಂದ ಪತ್ರ ಬಂದಿಲ್ಲ ಮತ್ತು ಹಸ್ತಾಂತರ ಪ್ರಕ್ರಿಯೆ ನಡೆದಿಲ್ಲ’ ಎಂದು ಪ್ರಾಚಾರ್ಯ ವಿಠ್ಠಲ ಚಿಕ್ಕಲಕಿ ತಿಳಿಸಿದರು.

ಕಟ್ಟಡ ನಿರ್ಮಾಣ ಹೊಣೆ ಹೊತ್ತಿದ್ದ ಲ್ಯಾಂಡ್ ಆರ್ಮಿ ಅಧಿಕಾರಿಗಳ ಮತ್ತು ಕಾಲೇಜಿನವರ ನಡುವೆ ಕಟ್ಟಡ ಹಸ್ತಾಂತರ ಕುರಿತು ಗೊಂದಲ ಉಂಟಾ ಗಿದ್ದು, ಕಟ್ಟಡ ಈಗ ಹಾಳು ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.