ರಬಕವಿ ಬನಹಟ್ಟಿ: ನಗರಸಭೆಯ ವ್ಯಾಪ್ತಿಯಲ್ಲಿಯ ಸಾರ್ವಜನಿಕರು ಬೀದಿ ನಾಯಿ, ದನ ಕರು ಮತ್ತು ಕತ್ತೆಗಳ ಕಾಟದಿಂದ ಬೇಸತ್ತಿದ್ದಾರೆ.

ಇವುಗಳಿಂದಾಗಿ ನಿತ್ಯ ಒಂದಾದರೂ ಅವಘಡ ಸಂಭವಿಸುತ್ತಿರುತ್ತದೆ. ಶಾಲೆ– ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರಿಗೆ ಮತ್ತು ವಾಹನ ಚಾಲಕರಿಗೆ ಬಹಳ ತೊಂದರೆಯಾಗಿದೆ.

ಶಾಲೆ–ಕಾಲೇಜು ಆವರಣದಲ್ಲಿಯೂ ಬೀದಿ ನಾಯಿ ಕಾಟ ಹೆಚ್ಚಾಗಿದೆ. ನಗರದ ಮಂಗಳವಾರ ಪೇಟೆಯಲ್ಲಿ ಮತ್ತು ಅನೇಕ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟದಿಂದ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಬೇರೆ ಊರುಗಳಿಂದ ಬರುವವರು ತೊಂದರೆ ಎದುರಿಸುತ್ತಿದ್ದಾರೆ. ಬೀದಿ ನಾಯಿಗಳ ಗದ್ದಲದಿಂದಾಗಿ ರಸ್ತೆ ಪಕ್ಕದಲ್ಲಿರುವ ಮನೆಯವರಿಗೆ ನಿದ್ದೆ ಇಲ್ಲದಂತಾಗಿದೆ ಎಂದು ರಾಜು ಪಿಟಗಿ ಮತ್ತು ರವಿ ಕುಳ್ಳಿ ದೂರಿದ್ದಾರೆ.

ಬೀದಿ ದನ ಕರುಗಳಿಗಷ್ಟೇ ಅಲ್ಲದೇ ಸಾಕು ದನಕರುಗಳು ಸಹ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿವೆ. ಜಮಖಂಡಿ–ಕುಡಚಿ ರಾಜ್ಯ ಹೆದ್ದಾರಿಯ ಮತ್ತು ರಬಕವಿಯ ಪ್ರಮುಖ ಈಶ್ವರ ಸನಕಲ್ ರಸ್ತೆಯ ಮೇಲೆ ದನಕರುಗಳು ಮಲಗಿಕೊಂಡು ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ.

ನಗರದ ತಮ್ಮಣ್ಣಪ್ಪ ಚಿಕ್ಕೋಡಿ ರಸ್ತೆ, ಕಾಡಸಿದ್ಧೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಎಲ್ಲಿರುವ ಕಸವನ್ನು ತಿನ್ನಲು ಕತ್ತೆಗಳು ಗುಂಪುಗೂಡಿರುತ್ತವೆ. ನಗರ ವ್ಯಾಪ್ತಿಯ ಸಂತೆಗಳಲ್ಲಿ ಇವುಗಳ ಹಾವಳಿ ಹೆಚ್ಚು.

ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ನೀಡಿ ಬೀದಿ ನಾಯಿ, ದನಕರು ಮತ್ತು ಕತ್ತೆಗಳ ಸರಿಯಾದ ನಿರ್ವಹಣೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರಾದ ಅವಿನಾಶ ಹಟ್ಟಿ, ವೆಂಕಟೇಶ ಕುಲಕರ್ಣಿ, ಶಂಭು ಉಕ್ಕಲಿ ಆಗ್ರಹಿಸಿದ್ದಾರೆ.

ಜುಲೈ 1ರಿಂದ 17ರವರೆಗೆ ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ 87ಕ್ಕೂ ಹೆಚ್ಚು ನಾಯಿ ಕಡಿತಗಳಾಗಿವೆ
ಡಾ.ಜಿ.ಎಸ್.ಗಲಗಲಿ ತಾಲ್ಲೂಕು ಆರೋಗ್ಯಾಧಿಕಾರಿ ಜಮಖಂಡಿ

ದನ–ಕತ್ತೆ ಮಾಲೀಕರಿಗೆ ನೋಟಿಸ್

ಬೀದಿ ನಾಯಿಗಳ ನಿರ್ಹಣೆಯ ಕುರಿತು ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಬೀಡಾಡಿ ಜಾನುವಾರಿನ ಜೊತೆ ಸಾಕು ಜಾನುವಾರನ್ನೂ ರಸ್ತೆಗೆ ಬಿಡಬಾರದು ಎಂದು ಕಸ ವಿಲೇವಾರಿ ವಾಹನಗಳ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ. ಕತ್ತೆಗಳ ಮಾಲೀಕರಿಗೂ ನೊಟೀಸ್ ನೀಡಲಾಗುವುದು. ರಮೇಶ ಜಾಧವ ಪೌರಾಯುಕ್ತ ರಬಕವಿ ಬನಹಟ್ಟಿ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.