ಭಾನುವಾರ, ಆಗಸ್ಟ್ 1, 2021
27 °C
ಮುಧೋಳ, ಜಮಖಂಡಿ, ಬಾದಾಮಿ ತಾಲ್ಲೂಕುಗಳಲ್ಲಿ ಉತ್ತಮ ಮಳೆ

ಖಾಜಿ ಬೀಳಗಿಯಲ್ಲಿ 52 ಮಿ.ಮೀ.ಯಷ್ಟು ದಾಖಲೆ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಜಿಲ್ಲೆಯಲ್ಲಿ ಸತತ ಎರಡನೇ ದಿನ ಪುನರ್ವಸು ಮಳೆಯ ಸಮೃದ್ಧಿ ಕಂಡಿದೆ. ಮುಧೋಳ, ಜಮಖಂಡಿ ಹಾಗೂ ಬಾದಾಮಿ ತಾಲ್ಲೂಕುಗಳಲ್ಲಿ ಉತ್ತಮವಾಗಿ ಮಳೆ ಸುರಿದರೆ ಬಾಗಲಕೋಟೆ, ಬೀಳಗಿ ಹಾಗೂ ಹುನಗುಂದ ತಾಲ್ಲೂಕುಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆ ಬಿದ್ದಿದೆ.

ಜಮಖಂಡಿ ತಾಲ್ಲೂಕಿನ ಖಾಜಿ ಬೀಳಗಿಯಲ್ಲಿ 52 ಮಿಲಿ ಮೀಟರ್ ಅತಿ ಹೆಚ್ಚು ಮಳೆ ದಾಖಲಾಗಿದೆ. ಮುಧೋಳ ತಾಲ್ಲೂಕಿನ ಲೋಕಾಪುರದಲ್ಲಿ 46 ಮಿಲಿ ಮೀಟರ್ ಮಳೆ ಸುರಿದಿದೆ.

ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲು 18, ಮಂಗಳಗುಡ್ಡ 11, ನೀರಬೂದಿಹಾಳ 12 ಮಿಲಿಮೀಟ್ ಮಳೆಯಾಗಿದೆ. ಬಾಗಲಕೋಟೆ ನಗರ 6, ಖಜ್ಜಿಡೋಣಿ 18, ಮುರನಾಳ 11.5, ಯಡಹಳ್ಳಿ 12.5, ಚಿಕ್ಕಶೆಲ್ಲಿಕೇರಿ 15.5, ದೇವನಾಳ 13, ಸೀಮಿಕೇರಿ 9.5, ಸುತಗುಂಡಾರ 8.5 ಮಿಲಿ ಮೀಟರ್ ಮಳೆ ಬಿದ್ದಿದೆ.

ಬೀಳಗಿ ತಾಲ್ಲೂಕಿನಲ್ಲಿ ಅನಗವಾಡಿ 7.5, ಹಿರೇಹಳ್ಳ 12.5, ಗಲಗಲಿ 8, ಹುನಗುಂದ ತಾಲ್ಲೂಕಿನ ಚಿಕನಾಳ 6.5, ಮುರುಡಿ 23.5, ಐಹೊಳೆ 10.5, ಅವರಾದಿ 24 ಮಿಲಿಮೀಟರ್ ಮಳೆಯಾಗಿದೆ.

ಜಮಖಂಡಿ ತಾಲ್ಲೂಕಿನ ಕಂಕಣವಾಡಿ 6.5, ಮುತ್ತೂರು 15, ಅಡಿಹುಡಿ,ಹನಗಂಡಿ, ಆಸಂಗಿ ತಲಾ 11, ತೇರದಾಳ 15, ಹಳಿಂಗಳಿ 14, ಕುಲಹಳ್ಳಿ 12, ಸಸಾಲಟ್ಟಿ 15.5 ಮಳೆ ಬಿದ್ದಿದೆ.

ಮುಧೋಳ ತಾಲ್ಲೂಕಿನ ಲೋಕಾಪುರ 46, ವಜ್ರಮಟ್ಟಿ 10, ಭಂಟನೂರು 24, ಚಿಚಖಂಡಿ 14.5, ದಾದನಟ್ಟಿ 29, ಕುಲ್ಲೋಳಗಿ, ಮಾಚಕನೂರು 14, ಬರಗಿ 13.5, ಲಕ್ಷಾನಟ್ಟಿ 27, ಮೆಳ್ಳಿಗೇರಿ 10, ನಂದಗಾವಿ 15.5, ಮದಬಾವಿ 9.5 ಮಿಲಿಮೀಟರ್ ಮಳೆ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು