ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ನೀಗಿಸಲು ಮಳೆ ನೀರು ಸಂಗ್ರಹವೇ ಪರಿಹಾರ: ಪವಿತ್ರಾ ಜಕ್ಕಪ್ಪನವರ

Published 27 ಜೂನ್ 2023, 13:46 IST
Last Updated 27 ಜೂನ್ 2023, 13:46 IST
ಅಕ್ಷರ ಗಾತ್ರ

ಗುಳೇದಗುಡ್ಡ: ಕೃಷಿ ಭೂಮಿಗಳಲ್ಲಿ ಕೃಷಿ ಹೊಂಡ, ಚೆಕ್ ಡ್ಯಾಂ, ಇಂಗು ಗುಂಡಿ, ಬದುಗಳ ನಿರ್ಮಾಣ ಮಾಡಿ ಇಂಗುಗುಂಡಿಗಳ ಮೂಲಕ ಮಳೆನೀರು ಸಂಗ್ರಹಿಸಿದರೆ ಜನ ಜಾನುವಾರಗಳಿಗೆ ನೀರಿನ ಬರ ತಪ್ಪಿಸಬಹುದು. ಅಲ್ಲದೆ, ಅಂತರ್ಜಲವನ್ನೂ ಹೆಚ್ಚಿಸಬಹುದು ಎಂದು ಮಳೆ ನೀರು ಸಂಗ್ರಹ ಅಭಿಯಾನ ತಂಡದ ಮುಖ್ಯಸ್ಥರಾದ ಪವಿತ್ರಾ ಜಕ್ಕಪ್ಪನವರ ಹೇಳಿದರು.

ಕೆಲವಡಿ ಗ್ರಾಮದಲ್ಲಿ ಬಾಗಲಕೋಟೆ ನೆಹರು ಯುವಕೇಂದ್ರದ ಆಶ್ರಯದಲ್ಲಿ ಮಂಗಳವಾರ ನಡೆದ ಮಳೆ ನೀರು ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಳೆ ನೀರು ಸಂಗ್ರಹಿಸಲು ಮಳೆಯ ಕುರಿತಾದ ಜನಪದ ಹಾಡುಗಳನ್ನು ಹಾಡುವ ಮೂಲಕ ಸಾರ್ವಜನಿಕರಿಗೆ, ರೈತರಲ್ಲಿ ಜಾಗೃತಿ ಮೂಡಿಸಿದರು.

ಡಾ. ಚಂದ್ರಶೇಖರ ಕಾಳನ್ನವರ ಮಾತನಾಡಿ, ರಾಜ್ಯದ ವಿವಿಧ ಪ್ರದೇಶಗಳಲ್ಲಿ ನೀರಿನ ಬರ ಎದುರಾಗುವ ಲಕ್ಷಣಗಳು ಕಂಡು ಬರುತ್ತಿವೆ. ಇದನ್ನು ತಪ್ಪಿಸಲು ಪ್ರತಿಯೊಬ್ಬರೂ ಮಳೆ ನೀರು ಸಂಗ್ರಹಿಸಬೇಕು. ಇದರಿಂದ ಮನುಷ್ಯರಿಗೆ ಅಷ್ಟೇ ಅಲ್ಲದೆ, ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗುತ್ತದೆ ಎಂದರು.

ಚಂದ್ರಶೇಖರ ಆಲೂರು, ಅಭಿಷೇಕ ಜಕ್ಕಪ್ಪನವರ, ನಿಂಗಪ್ಪ ತಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT