ಬಾದಾಮಿ : ರಾಘವೇಂದ್ರ ಸ್ವಾಮಿ 353ನೇ ಆರಾಧನಾ ಮಹೋತ್ಸವ ಅಂಗವಾಗಿ ಮಠದ ಆವರಣದಲ್ಲಿ ಗುರುವಾರ ಸಂಭ್ರಮದಿಂದ ರಾಯರ ರಥೋತ್ಸವ ನಡೆಯಿತು.
ರಥವನ್ನು ಅಲಂಕಾರಿಸಿ ರಾಯರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಭಕ್ತರು ಶ್ರದ್ಧೆ ಭಕ್ತಿಯ ಘೋಷಣೆಯೊಂದಿಗೆ ಮಠದ ಆವರಣದಲ್ಲಿ ರಥವನ್ನು ಸಾಗಿಸಿದರು. ವೃಂದಾವನದ ಗರ್ಭಗುಡಿಗೆ ರಥವು ತಲುಪಿ ಸಂಪನ್ನವಾಯಿತು.
ವಾಣಿ ಭಜನಾ ಮಂಡಳಿಯ ಸದಸ್ಯರು ಭಜನಾ ಸೇವೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಜಯತೀರ್ಥಾಚಾರ್ಯ ಇನಾಂದಾರ, ಗುರುರಾಜ ಪುರೋಹಿತ, ಕೆ.ವಿ. ಕೆರೂರ, ವಿಜಯೀಂದ್ರ ಇನಾಂದಾರ, ವಿ.ವೈ. ಭಾಗವತ, ಎಸ್.ಜಿ. ಕುಲಕರ್ಣಿ, ಅಡಿವೇಂದ್ರ ಇನಾಂದಾರ, ಪ್ರಸನ್ನ ಮುಗಳಿ, ಆರ್.ಕೆ. ದೇಶಪಾಂಡೆ ಇದ್ದರು.