ಮಂಗಳವಾರ, ಏಪ್ರಿಲ್ 7, 2020
19 °C
ಮಾರ್ಚ್ 31ರವರೆಗೆ ಓದುಗರಿಗೆ ಅವಕಾಶವಿಲ್ಲ

ಕೊರೊನಾ ವೈರಸ್ ಹರಡುವಿಕೆ ಭೀತಿ: ಗ್ರಂಥಾಲಯದಲ್ಲಿ ಕುಳಿತು ಓದಲು ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗರೂಕತಾ ಕ್ರಮವಾಗಿ ಮಾರ್ಚ್ 31 ರವರೆಗೆ ಸಾರ್ವಜನಿಕ ಗ್ರಂಥಾಲಯಗಳನ್ನು ಓದುಗರಿಗೆ ಮುಚ್ಚಲಾಗಿದೆ. ಬದಲಿಗೆ ಪುಸ್ತಕಗಳನ್ನು ಎರವಲು ಪಡೆದು ಮನೆಗೆ ಒಯ್ದು ಓದಬಹುದಾಗಿದೆ. 

ಪುಸ್ತಕಗಳನ್ನು ಓದುಗರಿಗೆ ವಿತರಿಸುವ ಸೇವೆ ಮುಂದುವರೆಸಲು ಸಿಬ್ಬಂದಿ ಗ್ರಂಥಾಲಯದಲ್ಲಿ ಹಾಜರಿರುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರು ಮಾರ್ಚ್ 17ರಂದು ಸುತ್ತೋಲೆ ಹೊರಡಿಸಿದ್ದಾರೆ.

ಅದರನ್ವಯ ಬಾಗಲಕೋಟೆಯ ಮುಖ್ಯ ಗ್ರಂಥಾಲಯ, 19 ಶಾಖಾ ಗ್ರಂಥಾಲಯ 157 ಗ್ರಾಮ ಪಂಚಾಯ್ತಿ ಮಟ್ಟದ ಗ್ರಂಥಾಲಯ ಹಾಗೂ 10 ಅಲೆಮಾರಿ, ಕೊಳಚೆ ಪ್ರದೇಶದ ಗ್ರಂಥಾಲಯಗಳನ್ನು ಬುಧವಾರದಿಂದ ಓದುಗರಿಗೆ ಮುಚ್ಚಲಾಗಿದೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಚೀಫ್ ಲೈಬ್ರರಿಯನ್ ಎಂ.ಎಸ್.ರೆಬಿನಾಳ ’ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು