ಜಮಖಂಡಿ (ಬಾಗಲಕೋಟೆ ಜಿಲ್ಲೆ) : ಆರ್ಥಿಕ ಸಂಕಷ್ಟದಲ್ಲಿದ್ದ ಬೀಳಗಿ ತಾಲ್ಲೂಕಿನ ಚವಡಾಪುರ ರಬಕವಿ ಗ್ರಾಮದ ಜ್ಯೋತಿ ಕಣಬೂರ ಅವರಿಗೆ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಆರ್ಥಿಕ ನೆರವು ನೀಡಿದ್ದಾರೆ. ಪಿಯುಸಿಯಲ್ಲಿ ಶೇ 83 ಅಂಕ ಗಳಿಸಿದ್ದ ಜ್ಯೋತಿ ಅವರಿಗೆ ಪದವಿ ಪ್ರವೇಶ ಪಡೆಯಲು ಹಣಕಾಸಿನ ಸಮಸ್ಯೆ ಎದುರಾಗಿತ್ತು.

ಚಹಾ ಅಂಗಡಿ ಹೊಂದಿರುವ ವಿದ್ಯಾರ್ಥಿನಿ ತಂದೆ ತೀರ್ಥಯ್ಯ, ತಮ್ಮದೇ ಗ್ರಾಮದ ನಿವಾಸಿ ವಿಜಯಪುರದಲ್ಲಿರುವ ಗುತ್ತಿಗೆದಾರ ಅನಿಲ ಹುಣಶಿಕಟ್ಟಿ ಅವರಿಗೆ ಜಮಖಂಡಿಯ ಬಿಎಲ್ಡಿಇ ಕಾಲೇಜಿನಲ್ಲಿ ಬಿಸಿಎಗೆ ಸೀಟು ಕೊಡಿಸಿ, ಆರ್ಥಿಕ ನೆರವು ಕೋರಿದ್ದರು. ಇದಕ್ಕೆ ಅವರೂ ಒಪ್ಪಿದ್ದರು.

ಅನಿಲ ಅವರು ಬೆಂಗಳೂರಿನ ಸ್ನೇಹಿತ ಅಕ್ಷಯ ನಾಯಕ ಜೊತೆ ಈ ವಿಷಯ ಹಂಚಿಕೊಂಡರು. ಅಕ್ಷಯ ಅವರು ಸ್ನೇಹಿತ ರಿಷಬ್ ಪಂತ್ ಅವರಿಗೆ ಇದನ್ನು ಗಮನಕ್ಕೆ ತಂದರು. ಕೂಡಲೇ ರಿಷಬ್ ಅವರು, ಕಾಲೇಜಿನ ಖಾತೆ ವಿವರ ಪಡೆದು, ಮೊದಲ ಸೆಮಿಸ್ಟರ್ನ ₹40 ಸಾವಿರ ಶುಲ್ಕ ಪಾವತಿಸಿದರು.

‘ಜ್ಯೋತಿ ಕಣಬೂರ ಅವರ ಬಗ್ಗೆ ಗೊತ್ತಾಗಿದೆ. ಅವರ ಕುಟುಂಬದವರ ಜೊತೆ ಚರ್ಚಿಸಿ, ಬಿಎಲ್ಡಿಇ ಸಂಸ್ಥೆಯಿಂದ ನೆರವು ನೀಡಲಾಗುವುದು’ ಎಂದು ಬಿಎಲ್ಡಿಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಶ್ರೀಕಾಂತ ಲಗಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.