ಬ್ರಿಸ್ಬೇನ್: 14ರ ಹರೆಯದ ಭಾರತದ ಆಕ್ರಮಣಕಾರಿ ಬ್ಯಾಟರ್ ವೈಭವ್ ಸೂರ್ಯವಂಶಿ, ಆಸ್ಟ್ರೇಲಿಯಾದ ನೆಲದಲ್ಲೂ ತಮ್ಮ ಅಮೋಘ ಆಟವನ್ನು ಮುಂದುವರಿಸಿದ್ದಾರೆ.

ಬ್ರಿಸ್ಬೇನ್ನ ಇಯಾನ್ ಹೀಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ 19 ವರ್ಷದವರೊಳಗಿನ ಯೂತ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಕೇವಲ 78 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಸೂರ್ಯವಂಶಿ ಅಬ್ಬರಿಸಿದ್ದಾರೆ.

ಸೂರ್ಯವಂಶಿ ಇನಿಂಗ್ಸ್ನಲ್ಲಿ ಎಂಟು ಸಿಕ್ಸರ್ಗಳು ಸೇರಿದ್ದವು. ಅಂತಿಮವಾಗಿ 86 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಎಂಟು ಸಿಕ್ಸರ್ ನೆರವಿನಿಂದ 113 ರನ್ ಗಳಿಸಿ ಔಟ್ ಆದರು.

ಮಧ್ಯಮ ಕ್ರಮಾಂಕದಲ್ಲಿ ವೇದಾಂತ್ ತ್ರಿವೇದಿ ಸಹ ಶತಕ ಗಳಿಸಿ ಗಮನ ಸೆಳೆದರು. ವೇದಾಂತ್ 192 ಎಸೆತಗಳಲ್ಲಿ 19 ಬೌಂಡರಿಗಳಿಂದ 140 ರನ್ ಗಳಿಸಿದರು.

ಆ ಮೂಲಕ ಮೊದಲ ಇನಿಂಗ್ಸ್ನಲ್ಲಿ428 ರನ್ ಗಳಿಸಿದ ಭಾರತ 185 ರನ್ಗಳ ಮುನ್ನಡೆಯನ್ನು ಗಳಿಸಿತು.

ಎರಡನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ ಒಂದು ವಿಕೆಟ್ ನಷ್ಟಕ್ಕೆ 8 ರನ್ ಗಳಿಸಿದ್ದು, 177 ರನ್ ಹಿನ್ನಡೆಯಲ್ಲಿದೆ.
.Asia Cup | ಟ್ರೋಫಿ ಕೊಂಡೊಯ್ದ ವಿವಾದ: ಎಸಿಸಿ ಸಭೆಯಲ್ಲಿ ಭಾರತ ತೀವ್ರ ಆಕ್ಷೇಪ.ಆರ್ಸಿಬಿ ಮಾರಾಟದ ಮಾತುಗಳಿಗೆ ಮತ್ತೆ ಜೀವ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.