ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರಾಟದ ಊಹಾಪೋಹಗಳಿಗೆ ಈಗ ಮತ್ತೆ ರೆಕ್ಕೆ ಮೂಡಿವೆ.

ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರು ‘ಎಕ್ಸ್’ನಲ್ಲಿ ಹಾಕಿರುವ ಸಂದೇಶವೇ ಇದಕ್ಕೆ ಕಾರಣ.

‘ಆರ್ಸಿಬಿಯ ಮೌಲ್ಯವು ₹ 17 ಸಾವಿರ ಕೋಟಿಯಾಗಬಹುದು‘ ಎಂದು ಮೋದಿ ಸಲಹೆ ನೀಡಿದ್ದಾರೆ. ಆದರೆ ಹೌಲಿಹಾನ್ ಲೋಕೆಸ್ ಮಾಡಿರುವ ಐಪಿಎಲ್ ಬ್ರ್ಯಾಂಡ್ ಮೌಲ್ಯದ ಅಧ್ಯಯನದ ಪ್ರಕಾರ ಆರ್ಸಿಬಿ ಮೌಲ್ಯವು ₹2300 ಕೋಟಿಯಾಗುವ ಅಂದಾಜು ಇದೆ.

ಆರ್ಸಿಬಿ ಖರೀದಿಸುವ ಆಕಾಂಕ್ಷಿಗಳಲ್ಲಿ ಪ್ರಮುಖವಾಗಿ ಸಿರಮ್ ಇನ್ಸ್ಟಿಟ್ಯೂಟ್ನ ಮುಖ್ಯಸ್ಥ ಆಧಾರ್ ಪೂನಾವಾಲಾ ಅವರ ಹೆಸರು ಕೂಡ ಈಚೆಗೆ ವರದಿಯಾಗಿತ್ತು.

ಆರ್ಸಿಬಿ ಮಾರಾಟದ ವದಂತಿಗಳು ಕಳೆದ ಜೂನ್ ತಿಂಗಳಲ್ಲಿ ಕೇಳಿಬಂದಿದ್ದವು. ಐಪಿಎಲ್ ಪ್ರಶಸ್ತಿ ಜಯಸಿದ್ದ ಆರ್ಸಿಬಿಯ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಸಾವಿಗೀಡಾಗಿದ್ದರು. ಹಲವರು ಗಾಯಗೊಂಡಿದ್ದರು.

ಆ ಸಂದರ್ಭದಲ್ಲಿ ಮುಂಬೈ ಶೇರು ವಿನಿಮಯ ಕೇಂದ್ರವು ಆರ್ಸಿಬಿಯ ಮಾಲೀಕತ್ವದ ಸಂಸ್ಥೆ ಡಿಯಾಜಿಯೊದಿಂದ ಸ್ಪಷ್ಟನೆ ಕೇಳಿತ್ತು. ಆಗ ಪ್ರತಿಕ್ರಿಯಿಸಿದ್ದ ಸಂಸ್ಥೆಯು ಮಾರಾಟ ಕುರಿತ ವದಂತಿಗಳನ್ನು ತಳ್ಳಿ ಹಾಕಿತ್ತು. ‘ಮಾಧ್ಯಮ ವರದಿಗಳು ಊಹಾಪೋಹಗಳಿಂದ ಕೂಡಿವೆ. ಮಾರಾಟ ಕುರಿತ ಮಾತುಕತೆಗಳು ನಡೆಯುತ್ತಿಲ್ಲ’ ಎಂದು ಡಿಯಾಜಿಯೊ ಸಂಸ್ಥೆಯು ಜೂನ್ 10ರಂದು ಬಿಎಸ್ಇಗೆ ಲಿಖಿತ ಸ್ಪಷ್ಟನೆ ನೀಡಿತ್ತು.

ಆದರೆ ಈಗ ಅದೇ ಕಂಪನಿಯು ‘ಮಾರುಕಟ್ಟೆಯೊಳಗಿನ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ’ ಎಂದು ಆರ್ಸಿಬಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಆರ್ಸಿಬಿಯ ಮಾಧ್ಯಮ ಸಮನ್ವಯ ವಿಭಾಗ ಕೂಡ ಇದೇ ಮಾತನ್ನು ಪುನರುಚ್ಚರಿಸಿದೆ.

ವಿರಾಟ್ ಕೊಹ್ಲಿ ಅವರು ಆರಂಭದಿಂದಲೂ ಈ ಫ್ರ್ಯಾಂಚೈಸಿಯಲ್ಲಿದ್ದಾರೆ. ಪ್ರಸ್ತುತ ಆರ್ಸಿಬಿಯು ಐಪಿಎಲ್ನ ಅತ್ಯಧಿಕ ಮೌಲ್ಯಯುಳ್ಳ ತಂಡವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.