ಗುಳೇದಗುಡ್ಡ: ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ತಾವು ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಕ್ಕೆ ತಾವು ಸದಾ ಬದ್ಧ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಪಟ್ಟಣದಲ್ಲಿ ಶಿವದಾಸಮಾರ್ಯ ಶಿವಸಿಂಪಿ ಸಮಾಜ ಅಭಿವೃದ್ಧಿ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಶಿವಶಂಪಿ ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಮ್ಮ ಅನುದಾನದಲ್ಲಿ ಸಂಸದರ ನೀತಿಯಿಂದ ಕೈಗೊಳ್ಳುವ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳು ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ನಡೆಯಬೇಕು. ಸಣ್ಣ ಸಮಾಜಗಳು ಸಂಘಟನೆ ಹೊಂದಬೇಕು ಎಂದರು.

ಆರಂಭಗೊಳ್ಳುವ ಸಮುದಾಯ ಭವನದ ಕಾಮಗಾರಿ ಅರ್ಧಕ್ಕೆ ನಿಲ್ಲದಂತೆ ಸಮಾಜದ ಮುಖಂಡರು ಜಾಗೃತಿ ವಹಿಸಬೇಕು. ಸಮಾಜದಲ್ಲಿನ ಪ್ರತಿಯೊಬ್ಬರೂ ಮುಂದಾಳತ್ವ ವಹಿಸಿ ಸಮುದಾಯ ಭವನ ಅಚ್ಚುಕಟ್ಟಾಗಿ ನಿರ್ಮಿಸಿ ಇತರೆ ಸಮಾಜಕ್ಕೆ ಶಿವಸಿಂಪಿ ಸಮಾಜ ಮಾದರಿಯಾಗಬೇಕು ಎಂದರು.

ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಮಾವಿನಮರದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಲಕ್ಷ್ಮಿ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಸಂಪತ ರಾಠಿ, ಸಂಜಯ ಕಾರಕುನ, ಸಂತೋಷ ನಾಯನೆಗಲಿ, ಅಶೋಕ ಹೆಗಡೆ, ಮಧುಸೂದನ ರಾಂದಡ, ಮುರುಗೇಶ ರಾಜನಾಳ, ಸಂಗಪ್ಪ ಹಡಪದ, ಸಿ.ಎಂ.ಚಿಂದಿ, ಉಮೇಶ ಹುನಗುಂದ, ರಾಜು ಚಿತ್ತರಗಿ, ಸಂಗಪ್ಪ ಹಡಪದ, ಭುವನೇಶ ಪೂಜಾರ, ಶಿವಂಪಿ ಸಮಾಜದ ಅಧ್ಯಕ್ಷ ಮಹಾಲಿಂಗಪ್ಪ ಕರನಂದಿ, ಸಿದ್ದು ಅಥಣಿ, ಮುತ್ತು ಮೊರಬದ, ಅಶೋಕ ಅಥಣಿ, ಬಸವರಾಜ ಗಂಗಾವತಿ, ವಿಜಯ ಹಡಗಲಿ, ಸಂಗಪ್ಪ ಶೆಟ್ಟರ, ಶರಣಪ್ಪ ತಾಳಿಕೋಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.