ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಆರ್‌ಟಿಇ: 556 ಸೀಟುಗಳು ಖಾಲಿ

Published 22 ಜುಲೈ 2023, 3:31 IST
Last Updated 22 ಜುಲೈ 2023, 3:31 IST
ಅಕ್ಷರ ಗಾತ್ರ

ಬಸವರಾಜ ಹವಾಲ್ದಾರ

ಬಾಗಲಕೋಟೆ: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಶಾಲೆಗಳಲ್ಲಿ ಬಡ ಮಕ್ಕಳಿಗಾಗಿ ಶೇ 25ರಷ್ಟು ಸೀಟು ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ 985 ಸೀಟುಗಳು ಲಭ್ಯವಿದ್ದು, ಎರಡನೇ ಸುತ್ತಿನ ನಂತರವೂ 429 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ.

ಮೊದಲ ಸುತ್ತಿನಲ್ಲಿ 535 ಸೀಟುಗಳ ಪ್ರವೇಶಕ್ಕೆ ಮಕ್ಕಳ ಆಯ್ಕೆ ಮಾಡಲಾಗಿತ್ತು. ಅದರಲ್ಲಿ 366 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಎರಡನೇ ಸುತ್ತಿನಲ್ಲಿ 131 ಸೀಟುಗಳ ಪ್ರವೇಶಕ್ಕೆ ಮಕ್ಕಳ ಆಯ್ಕೆಯಾಗಿತ್ತು.  ಆ ಪೈಕಿ 63 ವಿದ್ಯಾರ್ಥಿಗಳು ಪ್ರವೇ ಪಡೆದಿದ್ದಾರೆ. 556 ಸೀಟುಗಳು ಖಾಲಿ ಉಳಿದಿವೆ.

ಬಾದಾಮಿ, ಮುಧೋಳ, ಜಮಖಂಡಿ ತಾಲ್ಲೂಕುಗಳಲ್ಲಿ ಲಭ್ಯವಿರುವ ಸೀಟಿನಷ್ಟೂ ಅರ್ಜಿಗಳು ಸಲ್ಲಿಕೆಯಾಗದ್ದರಿಂದ ಅಲ್ಲಿ ಸೀಟುಗಳು ಖಾಲಿ ಉಳಿಯುವುದು ಖಾತ್ರಿಯಾಗಿತ್ತು. ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದ ಜಿಲ್ಲೆಗಳಲ್ಲಿಯೂ ಸೀಟುಗಳು ಖಾಲಿ ಉಳಿದಿವೆ.

ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ಅತಿ ಹೆಚ್ಚು 313 ವಿದ್ಯಾರ್ಥಿಗಳಿಗೆ, ಅತಿ ಕಡಿಮೆ ಎಂದರೆ ಬೀಳಗಿ ತಾಲ್ಲೂಕಿನಲ್ಲಿ ಕೇವಲ 33 ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಅವಕಾಶವಿತ್ತು. ಜಮಖಂಡಿ ತಾಲ್ಲೂಕಿನಲ್ಲಿ 130 ಹಾಗೂ ಬೀಳಗಿ ತಾಲ್ಲೂಕಿನಲ್ಲಿ 29 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಕನ್ನಡ ಮಾಧ್ಯಮ ಹೊಂದಿರುವ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿನ ಆರ್‌ಟಿಇ ಖೋಟಾದ ಸೀಟುಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರು ನಿರಾಸಕ್ತಿ ತೋರಿಸುತ್ತಿದ್ದಾರೆ. 

ಸರ್ಕಾರಿ ಅಥವಾ ಅನುದಾನಿತ ಶಾಲೆಗಳ ವ್ಯಾಪ್ತಿಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರ್‌ಟಿಇ ಪಟ್ಟಿಯಿಂದ ಹೊರಗಿಟ್ಟ ಮೇಲೆ ಆರ್‌ಟಿಇ ಅಡಿ ಸೀಟುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಪ್ರಮುಖ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಪಟ್ಟಿಯಿಂದ ಹೊರಗುಳಿದಿರುವುದರಿಂದ ಸೀಟು ಪಡೆಯಲು ಇದ್ದ ಪೈಪೋಟಿಯೂ ಕಡಿಮೆಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT