ಮುಧೋಳ: ಸಂವಿಧಾನ ಓದಿಕೊಂಡು ಕಾನೂನು ಪ್ರಕಾರ ಸತ್ಯ ಹೇಳುವ ಛಾತಿ ಬೆಳೆಸಿಕೊಳ್ಳಬೇಕು. ಮತ ನೀಡುವ ಮುನ್ನ ನೀವು ಎಂತಹ ವ್ಯಕ್ತಿಗೆ ಮತ ನೀಡುತ್ತೇವೆ ಎಂಬುದನ್ನು ಅರಿವಿನಲ್ಲಿಟ್ಟುಕೊಂಡು ಮತದಾನ ಮಾಡಬೇಕು. ಸರ್ಕಾರಗಳ ಕಾರ್ಯವನ್ನು ತುಲನೆ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಅವರು ಶನಿವಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಕುಮಕಾಲೆ ಪದವಿ ಪೂರ್ವ ಕಾಲೇಜ್ ಆಶ್ರಯದಲ್ಲಿ 2025-26 ನೇ ಸಾಲಿನ ಪದವಿ ಪೂರ್ವ ಕಾಲೇಜಿನ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಸೈಕ್ಲಿಂಗ್ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮದಲ್ಲಿನ ಚರ್ಚೆ ನೋಡಿ ನಮ್ಮ ನಿರ್ಧಾರ ತೆಗೆದುಕೊಳ್ಳದೆ ಸತ್ಯಾ ಸತ್ಯತೆ ಅರಿತು ದೇಶದ ಬದಲಾವಣೆಗೆ ಮುಂದಾಗಬೇಕು. ದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಅಂಬೇಡ್ಕರ್ ಹೆಚ್ಚು ದುಡಿದಿದ್ದಾರೆ. ಅವರು ಜಾರಿಗೆ ತಂದ ಹಿಂದೂ ಧಾರ್ಮಿಕ ಕಾನೂನು ಜಾರಿಗೆ ತಂದು ದೇಶದಲ್ಲಿನ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು, ಮಹಿಳೆಯರ ಸಬಲೀಕರಣ, ಮಹಿಳಾ ಪುನರ್ವಿವಾಹ, ವಿಚ್ಛೇದನ ಹಕ್ಕು ಸೇರಿದಂತೆ ಮಹಿಳೆಯರಿಗೆ ಹತ್ತಾರು ಅನುಕೂಲತೆ ಕಲ್ಪಿಸಿಕೊಟ್ಟಿದ್ದಾರೆ. ಆದ್ದರಿಂದ ಮಹಿಳೆಯರು ಅಂಬೇಡ್ಕರ್ ಅವರನ್ನು ಸ್ಮರಿಸಬೇಕು ಎಂದು ಹೇಳಿದರು.

ನಮ್ಮ ದೇಶ 145 ಕೋಟಿ ಜನರ ವಹಿವಾಟು ಸೇರಿದರೆ 4 ಟ್ರಿಲಿಯನ್ ಡಾಲರ್ ಎಕಾನಮಿ ಇದೆ. ಅದೇ ಜಪಾನ್ 12 ಕೋಟಿ ಜನಸಂಖ್ಯೆ 4.5, ಜರ್ಮನಿ 8 ಕೋಟಿ ಜನಸಂಖ್ಯೆ 4.7 ಟ್ರಿಲಿಯನ್ ಡಾಲರ್, ಚೀನಾ 19 ಟ್ರಿಲಿಯನ್ ಡಾಲರ್, ಅಮೆರಿಕಾ 30 ಕೋಟಿ ಜನಸಂಖ್ಯೆ 28 ಟ್ರಿಲಿಯನ್ ಡಾಲರ್ ಎಕಾನಮಿ ಇದೆ. ಅಂದರೆ ನಮ್ಮ ದೇಶ ಆರ್ಥಿಕಸ್ಥಿತಿ ಇನ್ನೂ ಸುಧಾರಿಸಬೇಕು. ದೇಶದ ಬದಲಾವಣೆಗೆ ಯುವಜನತೆ ಮುಂದಾಗಬೇಕು ಎಂದು ಹೇಳಿದರು.

ಸಂತೋಷ ಲಾಡ್ ಕಾಲೇಜ ಮಕ್ಕಳೊಂದಿಗೆ ಸಂವಾದ ಮಾಡಿದರು. ಸಚಿವರಿಗೆ ಅಣ್ಣಪ್ಪ ಧರ್ಮಟ್ಟಿ ಅವರು ನ್ಯಾಷನಲ್ ಲೇವಲ್ ದಲ್ಲಿ ದ್ವೀತಿಯ ಸ್ಥಾನ ಬಂದಿದ್ದು ಅವರಿಗೆ ಆರ್ಥಿಕ ಸಹಾಯ ಮಾಡಿ ಅಂತಾ ಉಷಾ ಧರ್ಮಟ್ಟಿ ರವರು ಮನವಿ ಮಾಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ ಮುಧೋಳ ಕ್ಷೇತ್ರದ ಕ್ರೀಡಾ ಪಟುಗಳು ಅದರಲ್ಲೂ ವಿಶೇಷವಾಗಿ ಕುಸ್ತಿ, ಕಬ್ಬಡ್ಡಿ ಕ್ರೀಡೆಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ದೈಹಿಕ ಮಾನಸಿಕವಾಗಿ ಆರೋಗ್ಯದಿಂದ ದುಶ್ಚಟಗಳಿಂದ ದೂರ ಇರಲು ಕ್ರೀಡೆ ಪ್ರಮುಖವಾಗಿದ್ದು ಎಲ್ಲ ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಡಾ.ಎಂ.ಎಂ.ಘಾರಗೆ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಲ್ಹಾದ ಕುಮಕಾಲೆ, ಡಾ.ಸಂಜಯ ಘಾರಗೆ, ಉದಯಸಿಂಹ ಪಡತಾರೆ, ಭೀಮ ಕುಮಕಾಲೆ, ಪ್ರಶಾಂತ ಕಾಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.