ಶನಿವಾರ, ಜುಲೈ 24, 2021
27 °C
ಮುಂಬೈನಿಂದ ಮರಳಿದ ಬಾಗಲಕೋಟೆ, ಬೆಳಗಾವಿ, ರಾಯಚೂರು ಜಿಲ್ಲೆಯವರು

ಶ್ರಮಿಕ್ ರೈಲಿನಲ್ಲಿ ಬಂದಿಳಿದ 43 ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಮುಂಬೈನಿಂದ ಕಾರ್ಮಿಕರನ್ನು ಹೊತ್ತು ತಂದ ಶ್ರಮಿಕ ರೈಲು ಮಂಗಳವಾರ ಬಾಗಲಕೋಟೆ ರೈಲು ನಿಲ್ದಾಣ ತಲುಪಿತು. ಬಾಗಲಕೋಟೆ ಜಿಲ್ಲೆಯ 31, ಬೆಳಗಾವಿಯ 11 ಹಾಗೂ ರಾಯಚೂರು ಜಿಲ್ಲೆಯ ಒಬ್ಬರು ಸೇರಿ ಒಟ್ಟು 43 ಮಂದಿ ಬಂದಿಳಿದರು.

ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿಯೇ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅಲ್ಲಿಂದ ಬಂದವರ ಮೇಲೆ ಸರ್ಕಾರ ತೀವ್ರ ನಿಗಾವಹಿಸುತ್ತಿದೆ. ರೈಲು ಬಾಗಲಕೋಟೆಗೆ ಬಂದ ವೇಳೆ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ನೇತೃತ್ವದ ತಂಡ ಹಾಜರಿದ್ದು, ಎಲ್ಲ ಮುಂಜಾಗ್ರತಾ ಕ್ರಮ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಂಡಿತು.

ಮುಂಬೈನಿಂದ ಬಂದ ಕಾರ್ಮಿಕರಿಗೆ ಆರೋಗ್ಯ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ಪ್ರಾಥಮಿಕ ತಪಾಸಣೆ ನಡೆಸಿ ಕೈಗಳಿಗೆ ಸೀಲ್ ಹಾಕಿದರು. ಪ್ರತ್ಯೇಕ ವಾಹನಗಳ ಮೂಲಕ ಬಂದ ಜಿಲ್ಲೆಯ 31 ಕಾರ್ಮಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಯಿತು. ಅಲ್ಲಿಯೇ ತಪಾಸಣೆಗೆ ವ್ಯವಸ್ಥೆ ಮಾಡಲಾಯಿತು. 

ಬೆಳಗಾವಿ ಜಿಲ್ಲೆಯ 11 ಮತ್ತು ರಾಯಚೂರು ಜಿಲ್ಲೆಯ ಒಬ್ಬ ವ್ಯಕ್ತಿಯನ್ನು ಅವರ ಜಿಲ್ಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.  ಮುಂಬೈನಿಂದ ಬಂದವರಲ್ಲಿ ಬಾಗಲಕೋಟೆಯ 17, ಇಳಕಲ್‌ನ 11, ಬಾದಾಮಿ, ಹುನಗುಂದ, ಬೀಳಗಿಯ ತಲಾ ಒಬ್ಬರು ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು