ರಬಕವಿ ಬನಹಟ್ಟಿ: ಡಾ. ಶ್ಯಾಮಪ್ರಸಾದ ಮುಖರ್ಜಿ ಅವರು ದೇಶದ ಅಖಂಡತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ಭಾರತೀಯ ಜನಸಂಘದ ಸಂಸ್ಥಾಪಕರಾದ ಅವರು, ನೇರ ನುಡಿ ಹೊಂದಿದ್ದರು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಇಲ್ಲಿನ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿಯವರ ಬಲಿದಾನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ಮೃತಿ ದಿನಾಚರಣೆಯಲ್ಲಿ ಮಾತನಾಡಿದರು.
ರಾಷ್ಟ್ರೀಯತೆ ಮತ್ತು ದೇಶದ ಸಮಗ್ರತೆಯನ್ನು ಹೊರತು ಪಡಿಸಿ ಬೇರೆ ಯಾವುದೇ ವಿಚಾರವನ್ನು ಯೋಚಿಸಿದವರಲ್ಲ. ಮುಖರ್ಜಿಯವರು ಒಬ್ಬ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಅವರ ಹೋರಾಟ ಮತ್ತು ಬದುಕು ನಮಗೆಲ್ಲರಿಗೂ ಮಾದರಿಯಾಗಿರಲಿ ಎಂದು ಹೇಳಿದರು.
ರಬಕವಿ ಬನಹಟ್ಟಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಭಾರತೀಯ ಜನತಾ ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಶ್ಯಾಮಪ್ರಸಾದ ಮುಖರ್ಜಿಯವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸುರೇಶ ಅಕ್ಕಿವಾಟ, ಸುವರ್ಣಾ ಕೊಪ್ಪದ, ಗೌರಿ ಮಿಳ್ಳಿ, ಶಂಕ್ರೆಪ್ಪ ಭುಜರುಕ, ಚಿದಾನಂದ ಹೊರಟ್ಟಿ, ಪ್ರವೀಣ ಧಬಾಡಿ, ಈರಣ್ಣ ಚಿಂಚಖಂಡಿ, ಅಶೋಕ ರಾವಳ, ಬಸವರಾಜ ಅಮ್ಮಣಗಿಮಠ ಸೇರಿದಂತೆ ಅನೇಕರು ಇದ್ದರು.