ಶುಕ್ರವಾರ, ಮಾರ್ಚ್ 31, 2023
26 °C

ಡ್ರಗ್ಸ್ ಜಾಲದಲ್ಲಿ ಭಾಗಿ ಆರೋಪ, ಸಾಕ್ಷಿಗಳಿದ್ದರೆ ಕ್ರಮ ಕೈಗೊಳ್ಳಲಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ಪರ ನಟಿ ರಾಗಿಣಿ ಜೊತೆ ಸೇರಿ ಪ್ರಚಾರ ಮಾಡಿದ್ದಾರೆ ಅಂದಾಕ್ಷಣ ಬಿ.ವೈ.ವಿಜಯೇಂದ್ರ ಡ್ರಗ್ಸ್ ಜಾಲದಲ್ಲಿದ್ದಾರೆ ಅಂತ ಹೇಳಲಾ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಬಾದಾಮಿ ತಾಲ್ಲೂಕಿನ ಗೋವನಕೊಪ್ಪದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಫಾಸಿಲ್ ಜೊತೆ ಸಿದ್ದರಾಮಯ್ಯ, ಜಮೀರ್ ಫೋಟೋ ಏನು ಹೇಳುತ್ತೆ‘ ಸಚಿವ ಸಿ.ಟಿ. ರವಿ ಹೇಳಿಕೆ ವಿಚಾರಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು.

’ನನಗೆ ಫಾಸಿಲ್ ಯಾರಂತ ಗೊತ್ತಿಲ್ಲ. ನಮ್ಮ ಜೊತೆ ಯಾರ್ಯಾರೋ ಫೋಟೋ ತೆಗೆಸಿಕೊಳ್ಳುತ್ತಾರೆ. ಕಳ್ಳರು ಬಂದು ಫೋಟೋ ತೆಗೆಸಿಕೊಳ್ಳಬಹುದು. ಫೋಟೋ ಯಾರ ಜೊತೆ ಇದೆ ಅನ್ನೋದು ಮುಖ್ಯವಲ್ಲ. ಡ್ರಗ್ಸ್ ಜಾಲದಲ್ಲಿ ಇದಾರಾ ಅನ್ನೋದು ಮುಖ್ಯ. ಸಾಕ್ಷಿಗಳಿದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ‘ ಎಂದರು.

'ಬಿಜೆಪಿಯವರು ಫೋಟೊ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಶಾಸಕ ಜಮೀರ್ ಅಹಮದ್ ಡ್ರಗ್ಸ್ ಜಾಲದಲ್ಲಿದ್ದಾನೆ ಅನ್ನೋದಕ್ಕೂ ಸಾಕ್ಷ್ಯ ಬೇಕಲ್ಲಪ್ಪಾ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು