ಗುರುವಾರ , ಆಗಸ್ಟ್ 5, 2021
28 °C

ಬಾಗಲಕೋಟೆ: ನಾಗರಹಾವು ಕಚ್ಚಿ ಉರಗ ಮಿತ್ರ ಸದಾಶಿವ ಕರಣಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬಾಗಲಕೋಟೆ: ಹಾವುಗಳನ್ನ ಹಿಡಿಯುವಲ್ಲಿ ಪರಿಣಿತಿ ಪಡೆದಿದ್ದ ಬಾದಾಮಿ ತಾಲ್ಲೂಕಿನ ಕಳಸಕೊಪ್ಪ ಗ್ರಾಮದ ಉರಗ ಮಿತ್ರ ಸದಾಶಿವ ಕರಣಿ (30) ಹಾವು ಕಚ್ಚಿ ಮೃತಪಟ್ಟಿದ್ದಾರೆ. 

ಸದಾಶಿವ ಕರಣಿ ಸ್ವಯಂ ಆಸಕ್ತಿಯಿಂದ ಹಾವು ಹಿಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಹೀಗಾಗಿ ಬಾದಾಮಿ ಪಟ್ಟಣ ಸೇರಿದಂತೆ ಕಳಸಕೊಪ್ಪದ ಸುತ್ತಲಿನ ಹಳ್ಳಿಗಳಲ್ಲಿ ಹಾವು ಕಂಡರೆ ಹಿಡಿಯಲು ಜನರು ಸದಾಶಿವ ಅವರಿಗೆ ಕರೆ ಮಾಡುತ್ತಿದ್ದರು. ಹಿಡಿದ ಹಾವನ್ನು ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರುತ್ತಿದ್ದರು.

ಕಳಸಕೊಪ್ಪದ  ಹೊಲವೊಂದರಲ್ಲಿ ಬುಧವಾರ ಮಧ್ಯಾಹ್ನ ನಾಗರಹಾವು ಹಿಡಿದಿದ್ದ ಸದಾಶಿವ ನಂತರ ಅದೇ ಹಾವು ಕಚ್ಚಿ ಅಸ್ವಸ್ಥಗೊಂಡಿದ್ದರು. ಅದಕ್ಕೆ ಮನೆಯಲ್ಲಿ ತಾನೇ ಗಿಡಮೂಲಿಕೆಯಿಂದ ಔಷಧಿ ತಯಾರಿಸಿ ಸದಾಶಿವ ಸೇವಿಸಿದ್ದರು. ಆದರೆ ತಡರಾತ್ರಿ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.

ಈ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು