ಬುಧವಾರ, ಜನವರಿ 19, 2022
27 °C

ರೈತರ ಚಳವಳಿ ಹೆಸರಲ್ಲಿ ಏನೋ ನಡೆಯುತ್ತಿದೆ: ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ನಮಗನಿಸಿದಂತೆ ಇಂದು ದೇಶದಲ್ಲಿ ನಡೆಯುತ್ತಿರುವುದು ರೈತರ ಚಳವಳಿ ಅಲ್ಲ. ಅದರ ಮುಖವಾಡದಲ್ಲಿ ಇನ್ನೇನೋ ನಡಿತಾ ಇದೆ. ಹಾಗಾಗಬಾರದು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ರೈತರ ಚಳವಳಿ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಮಸ್ಯೆ ಪರಿಹಾರಕ್ಕೆ ಚಳವಳಿ ನಿರತರನ್ನು ಮಾತುಕತೆಗೆ ಬರುವಂತೆ ಕರೆಯುತ್ತಲೇ ಇದ್ದಾರೆ.
ಇದಕ್ಕೆ ಒಪ್ಪದೆ ಇನ್ನೇನೋ ಮಾಡಬೇಕು ಎಂದು ಅವರು ಹೇಳುತ್ತಿರುವುದರಿಂದ ಚಳವಳಿ ದಿಕ್ಕು ತಪ್ಪಿ ಹೋಗಿದೆ.
ಹೀಗಾಗಿ ಈ ಚಳವಳಿಗೆ ನಮ್ಮ ಸಂಪೂರ್ಣ ಸಹಮತಿ ಇಲ್ಲ ಎಂದರು.

ಮಾಧ್ಯಮಗಳಲ್ಲಿ ಬಿತ್ತರವಾಗುವ ದೈನಂದಿನ ಸುದ್ಧಿ ನೋಡಿದರೆ ರೈತರೇ ಚಳವಳಿ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆಯೇ ನಮಗೆ ಸಂಶಯ ಇದೆ.

ಮಾಧ್ಯಮಗಳನ್ನು ನೋಡಿ ಹೇಳೋದಾದ್ರೆ ಅಲ್ಲಿರೋದು  ಪರೋಕ್ಷವಾಗಿ ರೈತರೇ ಅಲ್ಲ ಎಂದೆನಿಸುತ್ತದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು