ಮುಧೋಳ: ಹಿಂದಿನ ವರ್ಷಗಳ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು. ಪ್ರಸಕ್ತ ವರ್ಷ ಸರ್ಕಾರ ನಿಗದಿಪಡಿಸಿರುವ ಕಬ್ಬು ಬೆಳೆಗಾರರ ವಿರೋಧಿ ಬೆಲೆಯನ್ನು ನಾವು ಒಪ್ಪವುದಿಲ್ಲ. ನಮಗೆ ನ್ಯಾಯುತ ಬೆಲೆ ನೀಡಬೇಕು ಎಂದು ಆಗ್ರಹಿಸಿ ರೈತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರವೂ ಪ್ರತಿಭಟನೆ ನಡೆಸಿದರು.

ಮಂಗಳವಾರ ರಾತ್ರಿ ಪಿಡಬ್ಲೂಡಿ ಐಬಿಯಲ್ಲಿ ಜಿಲ್ಲಾಧಿಕಾರಿ, ಎಸ್,ಪಿ ನೇತೃತ್ವದಲ್ಲಿ ನಾಲ್ಕು ಗಂಟೆಗಳಿಗೂ ಅಧಿಕ ಕಾಲ ನಡೆದ ರೈತರ ಸಭೆ ಯಾವುದೇ ತೀರ್ಮಾನಕ್ಕೆ ಬಾರದೇ ಮುರಿದುಬಿತ್ತು.

ಬುಧವಾರ ರೈತ ಸಂಘ ಕರೆ ನೀಡಿದಂತೆ ಬೆಳಿಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತಾಲ್ಲೂಕಿನ ಎಲ್ಲ ರಸ್ತೆ, ಮುಖ್ಯ ರಸ್ತೆ, ಗ್ರಾಮೀಣ ಭಾಗದ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಮುಧೋಳಕ್ಕೆ ಬರಲು ಯಾವ ವಾಹನವು ಬರದಂತೆ ತಡೆಯಲಾಗಿತ್ತು. ಮುಧೋಳ ಮುಲಕ ಸಂಪರ್ಕ ಹೊಂದುತ್ತಿದ್ದ ವಿಜಯಪುರ, ನಿಪ್ಪಾಣಿ, ಬಾಗಲಕೋಟ, ಬೆಳಗಾವಿ ಧಾರವಾಡ ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಸಾವಿರಾರು ಪ್ರಯಾಣಿಕರು ಹೈರಾಣಾದರು.

ಸಕ್ಕರೆ ಕಾರ್ಖಾನೆಗಳು ಸರ್ಕಾರ ನಿಗದಿ ಪಡಿಸಿದಂತೆ ಪ್ರತಿ ಟನ್ ಕಬ್ಬಿ 3300 ನೀಡಲು ಒಪ್ಪಿಕೊಂಡಿವೆ. ಮೊದಲ ಕಂತು 3200 ಹಾಗೂ 50 ಹಾಗೂ ಸರ್ಕಾರದ ಪ್ರೋತ್ಸಹಧನ 50 ನೀಡಲು ಒಪ್ಪಿಕೊಂಡರೂ ರೈತರು ಒಪ್ಪಲು ತಯಾರಿಲ್ಲ. ಜಿಲ್ಲಾಧಿಕಾರಿಗಳೊಗೊಂಡ ಅಧಿಕಾರಿ ಪೊಲೀಸ್ ಅಧಿಕಾರಿಗಳು ಎಷ್ಟೇ ಪ್ರಯತ್ನಿಸುತ್ತಿದ್ದರೂ ರೈತರನ್ನು ಒಪ್ಪಿಸಲು ಸಾಧ್ಯವಾಗುತ್ತಿಲ್ಲ.

ಬುಧವಾರವೂ ನಿರಂತರ ಮಾತುಕತೆಗಳು ನಡೆಯುತ್ತಿದ್ದರೂ ಮಾತುಕತೆ ಫಲಪ್ರದಾಯವಾಗಿಲ್ಲ. ಬಸವಂತ ಕಾಂಬಳೆ,ದುಂಡಪ್ಪ ಯರಗಟ್ಟಿ, ಸುಭಾಷ ಶಿರಬೂರ, ಮುತ್ತಪ್ಪ ಕೋಮಾರ, ಈರಪ್ಪ ಹಂಚಿನಾಳ, ಮಹೇಶಗೌಡ ಪಾಟೀಲ, ಹನಮಂತ ಬಿರಾದಾರ ಪಾಟೀಲ, ಸುರೇಶ ಚಿಚಂಲಿ, ಸುರೇಶ ಡವಳೇಶ್ವರ, ಈರಪ್ಪ ಹಂಚಿನಾಳ, ರಾಚಪ್ಪ ಕಲ್ಲೋಳಿ, ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.