ಮೂರು ಲಿಂಗಗಳನ್ನು ನೀರಿನಲ್ಲಿ ಮುಳುಗಿಸಿ ಭಕ್ತಿಯಿಂದ ಪೂಜೆ ಮಾಡಿದರೆ ಮಳೆಯಾಗುತ್ತಿತ್ತು ಎಂಬ ಪ್ರತಿತಿ ಇದೆ ಹಿಂದೆ ಬರಗಾಲ ಬಿದ್ದ ಸಂದರ್ಭದಲ್ಲಿ ಈ ರೀತಿ ಪೂಜೆ ಮಾಡಿದರೆ ಮಳೆಯಾಗಿರುವ ಉದಾಹರಣೆಗಳಿವೆ. ಈ ದೇವಸ್ಥಾನದ ಜಾತ್ರೆಯು ಶ್ರಾವಣ ಮಾಸದ ಮೂರನೇ ಭಾನುವಾರ ನಡೆಯುತ್ತದೆ. ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗುತ್ತದೆ ಎಂದು ಅರ್ಚಕ ಆನಂದ ಜೋಶಿ ತಿಳಿಸಿದರು.