ಎಸ್.ಎಂ. ಹಿರೇಮಠ

ಬಾದಾಮಿ: ಚಾಲುಕ್ಯರ ಸ್ಮಾರಕಗಳಿರುವ ಬಾದಾಮಿ, ಐಹೊಳೆ, ಹಳೇ ಮಹಾಕೂಟ, ನಾಗನಾಥಕೊಳ್ಳ ಮತ್ತು ಹುಲಿಗೆಮ್ಮನಕೊಳ್ಳ ಸ್ಥಳಗಳಲ್ಲಿ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಒದಗಿಸಬೇಕಿದೆ ಎಂಬ ಸಾರ್ವಜನಿಕ ಅಭಿಪ್ರಾಯ ದಟ್ಟವಾಗಿ ಕೇಳಿಬರುತ್ತಿದೆ.

ನಾಲ್ಕು ದಶಕಗಳ ಹಿಂದೆ ವಿದೇಶಿ ಮಹಿಳೆಯೊಬ್ಬರು ಬಾದಾಮಿ ಉತ್ತರ ಬೆಟ್ಟದ ಸ್ಮಾರಕ ವೀಕ್ಷಿಸಲು ಹೋದಾಗ ಕಂದಕದಲ್ಲಿ ಬಿದ್ದು ಮೃತಪಟ್ಟ ಘಟನೆಯನ್ನು ಸ್ಮರಿಸಿದ ಸ್ಥಳೀಯರು, ಆ ಘಟನೆ ಹೇಗಾಯಿತು ಎಂದು ನಿಗೂಢವಾಗಿಯೇ ಉಳಿಯಿತು ಎಂದು ತಿಳಿಸಿದರು.

‘ಪ್ರವಾಸಿಗರ ದಟ್ಟಣೆ ಹೆಚ್ಚಿರುವ ಸ್ಥಳಗಳಾದ ನಾಗನಾಥನಕೊಳ್ಳ, ಹುಲಿಗೆಮ್ಮನಕೊಳ್ಳ, ಹಳೇ ಮಹಾಕೂಟ ಮತ್ತು ಐಹೊಳೆಯ ಮೇಗುತಿ ದೇವಾಲಯಕ್ಕೆ ಯುವಕ–ಯುವತಿಯರು ಬೈಕಿನಲ್ಲಿ ಬರುತ್ತಾರೆ. ಇಲ್ಲಿ ಏನಾದರೂ ಘಟನೆಗಳಾದರೆ ಯಾರು ಜವಾಬ್ದಾರಿ? ಈ ಸ್ಥಳಗಳಲ್ಲಿ ಪ್ರವಾಸಿಗರಿಗೆ ಹೆಚ್ಚಿನ ರಕ್ಷಣೆ ಒದಗಿಸಲು ಸಿಬ್ಬಂದಿ ನೇಮಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದರು.

‘ಬಾದಾಮಿ ಹೊರವಲಯದಲ್ಲಿ ಎರಡು ಹೋಮ್ ಸ್ಟೇ ಮತ್ತು ರೆಸಾರ್ಟ್ ಹೋಟೆಲ್ಗಳಿವೆ. ಇಲ್ಲಿ ಪ್ರವಾಸಿಗರಿಗೆ ಯಾವುದೇ ಭದ್ರತೆ ಇಲ್ಲ. ದೇಶಿ ಹಾಗೂ ವಿದೇಶಿ ಪ್ರವಾಸಿಗರು ಇಲ್ಲಿ ಆಗಮಿಸುವರು. ಇಲ್ಲಿ ಸೂಕ್ತ ರಕ್ಷಣೆ ಅವಶ್ಯವಾಗಿದೆ’ ಎಂದು ಆಗ್ರಹಿಸಿದ್ದಾರೆ.

‘ಕೊಪ್ಪಳ ಜಿಲ್ಲೆಯ ಪರಿಸರದ ಹೋಮ್ ಸ್ಟೇಯಲ್ಲಿ ಪ್ರವಾಸಿಗರ ಮೇಲೆ ನಡೆದ ಹಲ್ಲೆಯಿಂದ ಪ್ರವಾಸಿಗರಿಗೆ ಭಯದ ವಾತಾವರಣ ಉಂಟಾಗಿದೆ. ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಪ್ರವಾಸೋದ್ಯಮ ಮತ್ತು ಪೊಲೀಸ್ ಇಲಾಖೆ ಕ್ರಮವನ್ನು ಕೈಗೊಳ್ಳಬೇಕು’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

‘ಭಾರತೀಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು. ಡ್ರೋನ್ ಕ್ಯಾಮೆರಾ ಕಣ್ಗಾವಲು ಇಡಬೇಕು. ವಿಶೇಷವಾಗಿ ಪೊಲೀಸ್ ವಿಚಕ್ಷಕ ಸಂಚಾರ ದಳವನ್ನು ನೇಮಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಹೆಚ್ಚಿನ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ನೇಮಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆಯಲಾಗುವುದು. ಪ್ರವಾಸಿಗರ ರಕ್ಷಣೆಗೆ ಹೋಮ್ ಸ್ಟೇ ಮತ್ತು ರೆಸಾರ್ಟ್ಗಳಿಗೆ ನೋಟಿಸ್ ಕೊಡಲಾಗುವುದು. ಸ್ಮಾರಕಗಳಲ್ಲಿ ಟೂರಿಸ್ಟ್ ಮಿತ್ರರನ್ನು ನೇಮಿಸಲಾಗುವುದು’ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಿ.ಎಸ್. ಹಿತ್ತಲಮನಿ ಪ್ರತಿಕ್ರಿಯಿಸಿದರು.

‘ಪ್ರವಾಸಿಗರ ರಕ್ಷಣೆಗೆ ಈಗಾಗಲೇ ಬಾದಾಮಿ ಉತ್ತರ ಗುಡ್ಡದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ, ಇಲಾಖೆಯ ಇಬ್ಬರು ನೌಕರರು ಇದ್ದಾರೆ. ಅವಶ್ಯವಿದ್ದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಲಾಗುವುದು’ ಎಂದು ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ರಮೇಶ ಮೂಲಿಮನಿ ಪತ್ರಿಕೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.