ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ವಚನ ಪಂಚಾಮೃತ’ ಕೃತಿ ಲೋಕಾರ್ಪಣೆ

Published 2 ಜುಲೈ 2024, 16:13 IST
Last Updated 2 ಜುಲೈ 2024, 16:13 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ‘63 ಪುರಾತನರನ್ನು ನಮಗೆ ನೀಡಿದ ಡಾ.ಹಳಕಟ್ಟಿಯವರು 64ನೇ ಪುರಾತನರಾಗಿದ್ದಾರೆ. ಅವರ ಜನ್ಮ ದಿನೋತ್ಸವ ನಾಡಿನ ಹಬ್ಬವಾಗಬೇಕು. ಹಳಕಟ್ಟಿಯವರ ತವರೂರು ಬನಹಟ್ಟಿ.  ಹಳಕಟ್ಟಿಯವರ ಜನ್ಮ ದಿನೋತ್ಸವ ಬಸವಣ‍್ಣನವರಿಗೆ ಸಲ್ಲಿಸುವ ಗೌರವವಾಗಿದೆ’ ಎಂದು ಹಾರೂಗೇರಿ ನಿವೃತ್ತ ಪ್ರಾಚಾರ್ಯ ವಿ.ಎಸ್. ಮಾಳಿ ತಿಳಿಸಿದರು.

ಮಂಗಳವಾರ ಇಲ್ಲಿನ ಭದ್ರನವರ ಕಲ್ಯಾಣ ಮಂಟಪದಲ್ಲಿ ಡಾ.ಫ.ಗು.ಹಳಕಟ್ಟಿ ಅಭಿಮಾನಿ ಬಳದವರು ಹಮ್ಮಿಕೊಂಡ ಹಳಕಟ್ಟಿಯವರ ಜಯಂತ್ಯುತ್ಸವ ಮತ್ತು ‘ವಚನ ಪಂಚಾಮೃತ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ಹಳಕಟ್ಟಿಯವರ ಸಾಧನೆ ಮತ್ತು ಅವರಿಂದ ಸಂಶೋಧನೆ ಮಾಡಲ್ಪಟ್ಟ ವಚನ ಸಾಹಿತ್ಯವನ್ನು ಇಂದಿನ ಯುವಕರಿಗೆ ತಿಳಿಸುವಂತಾಗಬೇಕು. ಹಳಕಟ್ಟಿಯವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುವುದರ ಮೂಲಕ ನಾವು ಅವರಿಗೆ ಗೌರವ ಸಲ್ಲಿಸಬೇಕು’ ಎಂದು ನುಡಿದರು.

ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ಬನಹಟ್ಟಿಯ ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಬಸವರಾಜ ಭದ್ರನವರ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಕೋಲಾರ ಮಾತನಾಡಿದರು. ರಾಜಶೇಖರ ಮಾಲಾಪುರ, ಶ‍್ರೀಶೈಲ ಧಬಾಡಿ, ಶಂಕರ ಜುಂಜಪ್ಪನವರ, ಭೀಮಶಿ ಮಗದುಮ್, ವೀರೂಪಾಕ್ಷಪ್ಪ ಕೊಕಟನೂರ, ಶೈಲಜಾ ನುಚ್ಚಿ, ವೈ.ಬಿ.ಕೊರಡೂರ, ಮಹಾನಂದ ಕುಳ್ಳಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT