ಹುನಗುಂದ: ತಾಲ್ಲೂಕಿನ ಚಿತ್ತವಾಡಗಿ ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರ ಕಾರ್ತಿಕೋತ್ಸವ ಮಂಗಳವಾರ ಸಂಭ್ರಮದಿಂದ ನಡೆಯಿತು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿದ ವೀರಭದ್ರೇಶ್ವರನಿಗೆ ಕಾರ್ತಿಕ ದೀಪ ಹಚ್ಚಿ ಸಂಭ್ರಮಿಸಿದರು.

ವಿಶೇಷ ಅಲಂಕಾರ: ಕಾರ್ತಿಕೋತ್ಸವದ ನಿಮಿತ್ಯ ವೀರಭದ್ರೇಶ್ವರನಿಗೆ ವಿಶೇಷ ಅಲಂಕಾರ ಮಾಡಿದ್ದರು. ಭಕ್ತರು ಪೂಜೆ, ಅಭಿಷೇಕ ಮಾಡಿಸಿದರು. ದೇವಾಲಯದ ಸುತ್ತಮುತ್ತ ವಿದ್ಯುತ್ ದ್ವೀಪಗಳ ಅಲಂಕಾರ ಭಕ್ತರನ್ನು ಆಕರ್ಷಿಸಿತು. ವೀರಭದ್ರೇಶ್ವರನಿಗೆ ಕಾರ್ತಿಕ ದೀಪ ಹಚ್ಚಿದ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ತಿಕೋತ್ಸವದ ನಂತರ ನಡೆದ ಸಮಾರಂಭದಲ್ಲಿ ಅಮೀನಗಡ -ಯರಿಗೋನಾಳ ಪ್ರಭುಶಂಕರೇಶ್ವರ ಮಠದ ಶಂಕರರರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಕ್ಷೇತ್ರದ ಮಹಿಮೆ ಅಪಾರ. ಬದುಕಿನಲ್ಲಿ ಬರುವ ಕಷ್ಟ, ಸುಖಗಳನ್ನು ಸಮನಾಗಿ ಸ್ವೀಕರಿಸಿ’ ಎಂದರು.

ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ‘ಜ್ಯೋತಿ ಎಲ್ಲರಿಗೂ ಸಮನಾಗಿ ಬೆಳಕು ಕೊಡುತ್ತದೆ. ಅದೇ ರೀತಿ ಎಲ್ಲರೂ ಅನ್ಯೊನ್ಯತೆಯಿಂದ ಬದುಕುಬೇಕು’ ಎಂದು ಸಲಹೆ ನೀಡಿದರು.

ಹುನಗುಂದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮಾತನಾಡಿದರು.

ಪುರಗಿರಿ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿ, ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು ಸಿಡಿಪಿಒ ಮುತ್ತಣ್ಣ ಅರಳಿ, ನಿವೃತ್ತ ಇಂಜನೀಯರ್ ಬಾಲಚಂದ್ರಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.