ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲ ಜಿಲ್ಲೆಗಳಲ್ಲಿ ಬ್ಯಾಂಕ್‌ ಶಾಖೆ ಆರಂಭಿಸುವ ಗುರಿ: ಕಾಶಪ್ಪನವರ

Published : 20 ಸೆಪ್ಟೆಂಬರ್ 2024, 16:11 IST
Last Updated : 20 ಸೆಪ್ಟೆಂಬರ್ 2024, 16:11 IST
ಫಾಲೋ ಮಾಡಿ
Comments

ಹುನಗುಂದ: ರೈತರು, ಬಡಕೂಲಕಾರ್ಮಿಕರಿಗೆ ಹಣಕಾಸಿನ ಅನುಕೂಲವಾಗುವ ದೃಷ್ಟಿಯಿಂದ ಈ ಸಂಘ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಹಾಗೂ ಎಲ್ಲ ಜಿಲ್ಲೆಗಳಲ್ಲಿ ಬ್ಯಾಂಕ್‌ ಶಾಖೆ ಆರಂಭಿಸುವ ಗುರಿ ಹೊಂದಲಾಗಿದೆ’ ಎಂದು ಎಸ್.ಆರ್.ಕೆ. ಬ್ಯಾಂಕ್ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ನವನಗರದ ಪುರಸಭೆಯ ಮಂಗಲ ಭವನದಲ್ಲಿ ಶುಕ್ರವಾರ ಎಸ್.ಆರ್.ಕೆ.ಸೌಹಾರ್ದ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ 16ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂದಿನ 5 ವರ್ಷಗಳಲ್ಲಿ ರಾಯಚೂರು, ಕೊಪ್ಪಳ, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಶಾಖೆ ಆರಂಭಿಸಲಾಗುವುದು. ಇದೀಗ ಹುನಗುಂದ ಪಟ್ಟಣದಲ್ಲಿ ಪ್ರಧಾನ ಕಚೇರಿಯು ₹1 ಕೋಟಿ 50 ಲಕ್ಷ ವೆಚ್ಚದಲ್ಲಿ ಸ್ವಂತ ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿದೆ. ಗ್ರಾಹಕರ ಅನುಕೂಲಕ್ಕಾಗಿ  ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಆರಂಭಿಸುವ ಚಿಂತನೆ ಇದೆ ಎಂದು ತಿಳಿಸಿದರು.

ಪ್ರಧಾನ ವ್ಯವಸ್ಥಾಪಕ ಪಿ.ಎಸ್.ಭದ್ರಶೆಟ್ಟಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ₹6.02 ಲಕ್ಷ ನಿವ್ವಳ ಲಾಭ ಗಳಿಸಿದೆ. ದುಡಿಯುವ ಬಂಡವಾಳ ₹11.81 ಕೋಟಿ ಹೊಂದಿದೆ. ₹74.24 ಲಕ್ಷ ಶೇರುಬಂಡವಾಳ, ₹10.04 ಕೋಟಿ ಠೇವುಗಳನ್ನು ಹೊಂದಿದೆ ಎಂದು ಹೇಳಿದರು.

ಉಪಾಧ್ಯಕ್ಷ ಯಮನಪ್ಪ ಚಲವಾದಿ, ನಿರ್ದೇಶಕರಾದ ಗಂಗಾಧರ ದೊಡಮನಿ, ಅಮರೇಶ ನಾಗೂರ, ಮುತ್ತಣ್ಣ ಕಲಗೋಡಿ, ಮಹಾಂತೇಶ ನರಗುಂದ, ಪ್ರಭು ಇದ್ದಲಗಿ, ಶಿವಪ್ಪ ಭದ್ರಶೆಟ್ಟಿ, ಮಹಾಂತೇಶ ಕಡಿವಾಲ, ನಿಂಗಪ್ಪ ಬಿದರಕುಂದಿ, ಸಂಗಮೇಶ ಹಾವರಗಿ, ಜಯಶ್ರೀ ತಳವಾರ, ಅಕ್ಕಮ್ಮ ಪಾಟೀಲ, ಸಂಪನ್ಮೂಲ ಅಧಿಕಾರಿ ರಾಮಣ್ಣ ಅಂಬಿಗೇರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT