ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ | ಜಾಕ್‌ವೆಲ್ ಸೋರಿಕೆ: ಕುಡಿಯುವ ನೀರಿಗೆ ಹಾಹಾಕಾರ

ಎಚ್.ಎಸ್.ಘಂಟಿ
Published 18 ಮೇ 2024, 6:10 IST
Last Updated 18 ಮೇ 2024, 6:10 IST
ಅಕ್ಷರ ಗಾತ್ರ

ಗುಳೇದಗುಡ್ಡ: ಪಟ್ಟಣ ಸೇರಿದಂತೆ ಕೆಲವು ಹಳ್ಳಿಗಳಿಗೆ ಆಲಮಟ್ಟಿ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಆಗುತ್ತದೆ. ಆದರೆ ಆಲಮಟ್ಟಿ ಜಾಕ್‌ವೆಲ್‍ನಲ್ಲಿ ಸೋರಿಕೆ ಉಂಟಾಗಿದ್ದರಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ಕಳೆದ ಒಂದು ವಾರದಿಂದ ವ್ಯತ್ಯಯ ಉಂಟಾಗಿದ್ದು ಹಾಹಾಕಾರ ತಲೆದೋರಿದೆ.

ಪ್ರತಿ ಮೂರು, ಆರು ತಿಂಗಳಿಗೊಮ್ಮೆ ಜಾಕ್‌ವೆಲ್ ಸಮಸ್ಯೆ ಆಗುತ್ತಲೇ ಇದೆ. ಶಾಶ್ವತವಾಗಿ ಸಮಸ್ಯೆ ಪರಿಹರಿಸುವ ಅವಶ್ಯಕತೆ ಇದೆ. ನಿಮಾನುಸಾರ ಜಾಕ್‍ವೆಲ್‍ನಲ್ಲಿ ತೊಂದರೆಯಾದರೇ ಪರ್ಯಾಯ ಮಾರ್ಗಗಳನ್ನು ಅನುಸರಿಸಿಬೇಕು. ಹಾಗಿಲ್ಲದೆ ಇದ್ದಾಗ ಈ ರೀತಿ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ.

ಬೇಸಿಗೆ ಆಗಿರುವುದರಿಂದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಪಟ್ಟಣದಲ್ಲಿ ಕೆಲವರು ಬೋರವೆಲ್‍ಗಳಿಂದ ನೀರು ಪಡೆದರೆ, ಇನ್ನುಳಿದ ಕೆಲವರು ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ. ಬೇಗನೆ ಜಾಕ್‌ವೆಲ್ ದುರಸ್ತಿ ಮಾಡಿ ನೀರು ಪೂರೈಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ಬೂದಿನಗಡ ಗ್ರಾಮದಲ್ಲಿ ತೀವ್ರವಾದ ನೀರಿನ ಸಮಸ್ಯೆ: ಕಳೆದ ಎರಡು ದಿನಗಳಿಂದ ಬೂದಿನಗಡ ಗ್ರಾಮಗಳಲ್ಲಿ ಗ್ರಾಮದೇವತೆ ಜಾತ್ರೆ ನಡೆಯುತ್ತಿರುವುದರಿಂದ ಆಲಮಟ್ಟಿ ನೀರು ಪೂರೈಕೆಯಾಗುವ ಮಾರ್ಗ ಮಧ್ಯದ ಈ ಗ್ರಾಮಗಳು ನೀರಿಲ್ಲದೆ ಪರದಾಡುವಂತಾಗಿದೆ. ಜಾತ್ರೆಗೆ ಆಗಮಿಸಿದ ಬಂಧುಗಳು ಮತ್ತು ಆತ್ಮೀಯರು ಕುಡಿಯುವ ನೀರಿನ ಸಂಕಟ ಅನುಭವಿಸುತ್ತಿದ್ದಾರೆ. ಹೊಲಗಳಲ್ಲಿರುವ ಬೋರವೆಲ್‌ಗಳಿಗೆ ಹೋಗಿ ಬಂಡಿಯಲ್ಲಿ ಬ್ಯಾರೆಲ್‍ಗಳ ಮೂಲಕ ನೀರು ತರುತ್ತಿದ್ದಾರೆ.

‘ಇನ್ನೆರಡು ದಿನಗಳಲ್ಲಿ ಸಮಸ್ಯೆ ಪರಿಹಾರ’
ಬೂದಿನಗಡ ಗ್ರಾಮದ ಮೂವರು ರೈತರ ಪಂಪ್‌ಸೆಟ್ ನೀರನ್ನು ಸಾರ್ವಜನಿಕವಾಗಿ ಬಳಕೆ ಮಾಡಲಾಗುತ್ತಿದ್ದು, ನೀರಿನ ಪೂರೈಕೆಯಲ್ಲಿ ಸ್ವಲ್ಪ ತೊಂದರೆಯಾಗಿದೆ. ಇನ್ನೆರಡು ದಿನಗಳಲ್ಲಿ ಎಲ್ಲ ಸಮಸ್ಯೆ ಸರಿಯಾಗುವ ವಿಶ್ವಾಸ ಇದೆ ಎಂದು ಹಳದೂರ ಗ್ರಾಮ ಪಂಚಯ್ತಿ ಪಿಡಿಒ ಈ.ಕೆ.ಹೊರಟ್ಟಿ ಹೇಳಿದರು.
ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ ನೀರು ಸರಬರಾಜು ಮಾಡಬೇಕು ಹಾಗೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು
ವಿಠ್ಠಲಸಾ ಬದಿ, ಗ್ರಾಮಸ್ಥ
ಜಾಕ್‌ವೆಲ್‌ ದುರಸ್ತಿ ಕೆಲಸ ಆರಂಭವಾಗಿದ್ದು, ಇನ್ನೊಂದು ದಿನದಲ್ಲಿ ಮುಗಿಯಲಿದೆ. ನಂತರ ಮೊದಲಿನಂತೆ ನೀರು ಪೂರೈಕೆ ಮಾಡಲಾಗುವುದು
ರಾಜೇಶ ಕೋತಿನ,ಮುಖ್ಯಾಧಿಕಾರಿ, ಪುರಸಭೆ ಗುಳೇದಗುಡ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT