ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬಕವಿ ಬನಹಟ್ಟಿ | ಮಹಿಳಾ ದಿನಾಚರಣೆ: ಮಾ.6 ರಂದು ವಿವಿಧ ಸ್ಪರ್ಧೆ

Published 3 ಮಾರ್ಚ್ 2024, 14:08 IST
Last Updated 3 ಮಾರ್ಚ್ 2024, 14:08 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಪರಮೇಶ್ವರಿ ಮಹಿಳಾ ಕೋ-ಆಪ್ ಕ್ರೆಡಿಟ್ ಸೊಸೈಟಿ ಆಶ್ರಯದಲ್ಲಿ ಮಾ.6 ರಂದು ಮಹಿಳೆಯರಿಗಾಗಿ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಇಲ್ಲಿನ ಸಿದ್ಧಾರೂಢ ಮಠದಲ್ಲಿ ವಚನಗಾಯನ ಸ್ಪರ್ಧೆ, ಮಹಿಳಾ ಸಾಧಕಿಯರ ಕುರಿತು ಭಾಷಣ ಸ್ಪರ್ಧೆ, ಭರತ ನಾಟ್ಯ ಮತ್ತು ಅಲ್ಲಿಯೇ ಸ್ಪರ್ಧೆ ಮತ್ತು ಅಲ್ಲಿಯೇ ಬಹುಮಾನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಾ.9 ರಂದು ಬೆಳಗ್ಗೆ 9 ಕ್ಕೆ ಈಶ್ವರಲಿಂಗ ಸಮುದಾಯ ಭವನದಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಮಾಲಾ ಬಾವಲತ್ತಿ ತಿಳಿಸಿದರು.

ಹೆಚ್ಚಿನ ಮಾಹಿತಿಗೆ 97437 99869 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT