ಬಾದಾಮಿ: ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ಮೇಲಿರುವ ಹಾಗನೂರ ಗ್ರಾಮದಲ್ಲಿ ನೆರೆ ತಹಶೀಲ್ದಾರ್ ಮತ್ತು ಪೊಲೀಸ್ ಸಿಬ್ಬಂದಿ ನೆರೆ ಸಂತ್ರಸ್ತರನ್ನು ಹೊರಗೆ ಹಾಗಿ ಸಂತ್ರಸ್ತರ ಮನೆಗಳಿಗೆ ಬೀಗ ಹಾಕಿದ್ದನ್ನು ನೆರೆ ಸಂತ್ರಸ್ತರು ಪ್ರತಿಭಟಿಸಿದರು.

ಹಾಗನೂರ ಗ್ರಾಮದ 29 ಕುಟುಂಬಗಳ ನೆರೆ ಹಾವಳಿ ಸಂತ್ರಸ್ತರಾದ ಮಹಿಳೆಯರು, ಮಕ್ಕಳು ಮತ್ತು ಕುರಿಗಳ ಸಮೇತ ಬುಧವಾರ ಇಲ್ಲಿನ ಮಿನಿ ವಿಧಾನ ಸೌಧದ ಎದುರಿಗೆ ಉಪವಾಸ ಸತ್ಯಾಗ್ರಹ ಕೈಗೊಂಡರು. ತಹಶೀಲ್ದಾರ್ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಿದರು.

`ಎರಡು ವರ್ಷಗಳಿಂದ ಆಸರೆ ಮನೆಯಲ್ಲಿ ವಾಸವಾಗಿದ್ದೇವೆ. ಏಕಾಏಕಿ ಅಧಿಕಾರಿಗಳು ಬಂದು ನೀವು ಆಸರೆ ಮನೆಯಲ್ಲಿ ವಾಸಿಸಲು ಅನರ್ಹ ಕುಟುಂಬಗಳು ಎಂದು ನಮ್ಮನ್ನು ಹೊರಗೆ ಹಾಕಿ ಮನೆಗೆ ಬೀಗಹಾಕಿ ನಮ್ಮನ್ನು ಬೀದಿಪಾಲು ಮಾಡಿದ್ದಾರೆ' ಎಂದು ಸಂತ್ರಸ್ತರು ನೋವನ್ನು ವ್ಯಕ್ತಪಡಿಸಿದರು.

ಗ್ರಾಮಸಭೆ ನಡೆಸಿ ನಮಗೆ ಮನೆಯ ಹಕ್ಕುಪತ್ರ ಕೊಡಿ ಎಂದು ಎರಡು ವರ್ಷಗಳಿಂದ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಈ ಕುರಿತು ತಹಶೀಲ್ದಾರ್ ಅಜೀಜ್ ದೇಸಾಯಿ ಅವರನ್ನು `ಪ್ರಜಾವಾಣಿ' ಸಂಪರ್ಕಿಸಿದಾಗ ಗ್ರಾಮದಲ್ಲಿ ಗ್ರಾಮ ಸಭೆ ನಡೆಸಿ ಅರ್ಹ ನೆರೆ ಸಂತ್ರಸ್ತರನ್ನು ಗುರುತಿಸಿ ಜಿಲ್ಲಾಧಿಕಾರಿ ಮೂಲಕ ಹಕ್ಕುಪತ್ರ ಕೊಡುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.