ಏನಿದು ಜಿಲ್ಲಾ ಕಾರ್ಮಿಕ ಸೇವೆಗಳ ಸಹಕಾರ ಸಂಘ?
ಸರ್ಕಾರದ ಪ್ರತಿ ಇಲಾಖೆ, ಮಂಡಳಿ, ನಿಗಮಗಳಿಗೆ ಅಗತ್ಯವಿರುವ ಗುತ್ತಿಗೆ ನೌಕರರನ್ನು ನೇಮಿಸುವುದು ‘ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘಗಳ’ ಮುಖ್ಯ ಉದ್ದೇಶ. ಇದಕ್ಕೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ನೌಕರರಿಗೆ ಸರ್ಕಾರದ ಮೂಲಕವೇ ನೇರವಾಗಿ ವೇತನ ಪಾವತಿ, ಭವಿಷ್ಯ ನಿಧಿ, ಇಎಸ್ಐ, ಸಾಲ ಸೌಲಭ್ಯ ಸೇರಿದಂತೆ ವಿವಿಧ ಭದ್ರತೆಗಳನ್ನು ಸಂಘ ಒದಗಿಸುತ್ತದೆ. ಗುತ್ತಿಗೆ ಕಾರ್ಮಿಕರು ಎದುರಿಸುತ್ತಿರುವ ಅನಿಶ್ಚಿತತೆ ದೂರವಾಗುವ ಆಶಯವಿದೆ. ಕಾರ್ಮಿಕ ಸಂಘ ಆರಂಭವಾದರೆ, ಏಜೆನ್ಸಿಗಳಿಂದ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪದ್ಧತಿಯೇ ನಿರ್ಮೂಲನೆಯಾಗುತ್ತದೆ.