ಈ ಕುರಿತು ಸಾಮಾಜಿಕ ಮಾಧ್ಯಮ ‘ಫೇಸ್‌ಬುಕ್’ನಲ್ಲಿ ಪೋಸ್ಟ್ ಪ್ರಕಟಿಸಿರುವ ಅವರು ‘ತಿರುಪತಿಯ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಿದೆ. ತಿರುಪತಿ ತಿಮ್ಮಪ್ಪ ದೇಗುಲ ಮತ್ತು ಅಲ್ಲಿಯ ಪ್ರಸಾದಕ್ಕೆ ತನ್ನದೇ ಆದ ವೈಶಿಷ್ಟತೆ ಇದೆ. ಯಾರೂ ಏನೋ ಮಾಡಿದ್ದಾರೆ ಎಂದಾಕ್ಷಣ ಅದರ ಘನತೆಗೆ ದಕ್ಕೆ ಬರುವುದಿಲ್ಲ. ಇಷ್ಟು ದಿನವೂ ಪ್ರಸಾದವನ್ನು ಭಕ್ತಿ ಭಾವದಿಂದ ಸ್ವೀಕಾರ ಮಾಡಿದ್ದೇನೆ. ಮುಂದೆಯೂ ಸ್ವೀಕಾರ ಮಾಡ್ತೇನೆ’ ಎಂದು ಅವರು ಹೇಳಿದ್ದಾರೆ.