ಪ್ರಭಂಜನ್‌ಗೆ ಹಣೆಪಟ್ಟಿ ಕಳಚುವುದೇ?
ಮೇಯರ್ ಆಗಬೇಕೆಂಬ ಉಮೇದಿನೊಂದಿಗೆ ಎರಡು ಬಾರಿ ಪ್ರಯತ್ನ ನಡೆಸಿದ್ದ ಕಾರ್ಪೊರೇಟರ್ ಪ್ರಭಂಜನ್ ಅವರಿಗೆ ಪಕ್ಷೇತರ ಅಭ್ಯರ್ಥಿ ಎಂಬ ಹಣೆಪಟ್ಟಿ ಇನ್ನಿಲ್ಲದಂತೆ ಕಾಡಿದೆ. ಅವರು ಈ ಬಾರಿಯೂ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ. ಈ ಸಲ ಹಣೆಪಟ್ಟಿ ಕಳಚಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಕಾಂಗ್ರೆಸ್ ಪಡಸಾಲೆಯಲ್ಲಿ ಗುಸುಗುಸು ಇದೆ. ಅದಕ್ಕೆ ಪೂರಕವಾಗಿ ಸಂಖ್ಯಾಬಲವೂ ಕ್ರೋಡೀಕರಣಗೊಳ್ಳುತ್ತಿರುವ ಮುನ್ಸೂಚನೆಗಳಿವೆ.