ಅರಸೀಕೆರೆ: ಹರಪನಹಳ್ಳಿ - ಜಗಳೂರು ಗಡಿ ಭಾಗದ ಬಸವನಕೋಟೆ ಸುತ್ತಮುತ್ತ ಒಂದು ವಾರದಿಂದ ಕರಡಿ ಕಂಡುಬಂದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಅರಸೀಕೆರೆ - ಬಸವನಕೋಟೆ - ಮಾದಿಹಳ್ಳಿ ಗ್ರಾಮದ ರಸ್ತೆಗಳಲ್ಲಿ ಆಗಾಗ್ಗೆ ಕರಡಿ ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ರೈತರು-ಕಾರ್ಮಿಕರು ಹೊಲಗಳಿಗೆ ಹೋಗಲು ಹೆದರುತ್ತಿದ್ದಾರೆ.
ಅರಸೀಕೆರೆ ಮೂಲಕವೇ ಧಾರ್ಮಿಕ ಪ್ರಸಿದ್ಧ ಮಡ್ರಳ್ಳಿ ಚೌಡಮ್ಮ ದೇವಸ್ಥಾನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಹೋಗುವುದರಿಂದ ಆತಂಕದಲ್ಲಿ ಸಾಗಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.