ಮಂಗಳವಾರ, ಮಾರ್ಚ್ 21, 2023
29 °C

ಹೊಸಪೇಟೆ | ಭಾರತ್‌ ಜೋಡೋ ಯಾತ್ರೆ ಸಮಾಪ್ತಿ: ತ್ರಿವರ್ಣ ಧ್ವಜಾರೋಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ನಡೆದ ‘ಭಾರತ್‌ ಜೋಡೋ’ ಐಕ್ಯತಾ ಪಾದಯಾತ್ರೆ ಸಮಾರೋಪದ ಅಂಗವಾಗಿ ಜಿಲ್ಲಾ ಕಾಂಗ್ರೆಸ್‌ನಿಂದ ಸೋಮವಾರ ನಗರದಲ್ಲಿ ತ್ರಿವರ್ಣ ಧ್ವಜಾರೋಹಣ ಹಾಗೂ ಮಹಾತ್ಮ ಗಾಂಧೀಜಿ 75ನೇ ಪುಣ್ಯಸ್ಮರಣೆ ಮಾಡಲಾಯಿತು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ಅವರು ಧ್ವಜಾರೋಹಣ ಮಾಡಿದರು. ಬಳಿಕ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು. ‘ಭಾರತ್ ಜೋಡೋ ಐಕ್ಯತಾ ಪಾದಯಾತ್ರೆ ಮುಕ್ತಾಯ ಸಮಾರಂಭ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆಯುತ್ತಿದೆ. ಅದರ ಭಾಗವಾಗಿ ಈ ಕಾರ್ಯಕ್ರಮ ದೇಶದಾದ್ಯಂತ ಆಚರಿಸಲಾಗುತ್ತಿದೆ’ ಎಂದು ಹೇಳಿದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ತ್ಯಾಗ, ಬಲಿದಾನ ಕೊಟ್ಟಿದ್ದಾರೆ. ಅಂಥವರಲ್ಲಿ ಮಹಾತ್ಮ ಗಾಂಧೀಜಿ ಮುಂಚೂಣಿ ನಾಯಕರು. ಅವರ ಜೀವನವೇ ಎಲ್ಲರಿಗೂ ದೊಡ್ಡ ಆದರ್ಶ’ ಎಂದು ತಿಳಿಸಿದರು.

ವಿಜಯನಗರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್‌ ಇಮಾಮ್ ನಿಯಾಜಿ, ಹೊಸಪೇಟೆ ಮತ್ತು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ವಿನಯ್ ಶೆಟ್ಟರ್, ಸಿ.ಖಾಜಾ ಹುಸೇನ್, ಮಹಿಳಾ ಮೋರ್ಚಾ ತಾಲ್ಲೂಕು ಅಧ್ಯಕ್ಷೆ ಯೋಗಲಕ್ಷ್ಮಿ, ಮುಖಂಡರಾದ ಗುಜ್ಜಲ್‌ ನಾಗರಾಜ್, ಎಲ್.ಸಿದ್ದನಗೌಡ, ಕುರಿ ಶಿವಮೂರ್ತಿ, ನಿಂಬಗಲ್ ರಾಮಕೃಷ್ಣ, ಎಂ.ಸಿ.ವೀರಸ್ವಾಮಿ, ಸೈಯ್ಯದ್ ಮಹಮ್ಮದ್, ‌ಭಾಗ್ಯಲಕ್ಷ್ಮಿ ಭರಾಡೆ, ಸಣ್ಣ ಈರಪ್ಪ, ಬಾಣದ ಗಣೇಶ, ಕುಬೇರಾ ದಲಾಲಿ, ಸಿ.ಕೃಷ್ಣ, ವಿಜಯಕುಮಾರ್, ಭರತ ಕುಮಾರ್, ಸೈಯದ್ ಬುಡನ್, ಬಾಬ, ನಬಿಸಾಬ್, ರಾಮಾಂಜಿನಿ, ವೆಂಕಪ್ಪ, ಕರಿ ಹನುಮಂತಪ್ಪ, ವಾಸಿಂ, ರಾಯಪ್ಪ ಮಹದೇವಪ್ಪ, ಮಹಮ್ಮದ್ ಜಾವಿದ್, ನಾಗರಾಜ್ ಕೇಶವ, ವರಲಕ್ಷ್ಮಿ ಶಿವರಾಜ್, ಮಂಜುಳಾ, ಕವಿತಾ ನಾಯಕ, ರಾಧ ನಾಯ್ಡು, ಶಿಲ್ಪಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು