ಹೊಸಪೇಟೆ (ವಿಜಯನಗರ): ‘ವಿಜಯನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ, ಗುರುವಾರ (ಮಾ.15,16) ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ’ ಎಂದು ಪಕ್ಷದ ಜಿಲ್ಲಾ ವಕ್ತಾರ ಅನಂತ ಪದ್ಮನಾಭ ತಿಳಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಭಗವಂತ ಖೂಬಾ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ್ ಕಟೀಲ್, ಶಾಸಕ ಜಗದೀಶ್ ಶೆಟ್ಟರ್, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಸೇರಿದಂತೆ ಇತರೆ ಮುಖಂಡರು ಪಾಲ್ಗೊಳ್ಳುವರು ಎಂದು ವಿವರಿಸಿದರು.
ಮಾ. 15ರಂದು ಬೆಳಿಗ್ಗೆ ಕೂಡ್ಲಿಗಿಯಲ್ಲಿ ರೋಡ್ ಶೋ ನಡೆಯಲಿದೆ. ಸಂಜೆ ಹಗರಿಬೊಮ್ಮನಹಳ್ಳಿಯಲ್ಲಿ ಸಾರ್ವಜನಿಕ ಸಭೆ ಜರುಗಲಿದೆ. ಮಾ. 16ರಂದು ಬೆಳಿಗ್ಗೆ ಹೊಸಪೇಟೆಯಲ್ಲಿ ರೋಡ್ ಶೋ ನಡೆಯಲಿದೆ. ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಪಾಲ್ಗೊಳ್ಳುವರು. ಅನಂತರ ಹೂವಿನಹಡಗಲಿಯಲ್ಲಿ ರೋಡ್ ಶೋ, ಹರಪನಹಳ್ಳಿಯಲ್ಲಿ ಸಂಜೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ಹಂಚಿಕೊಂಡರು. ಮುಖಂಡರಾದ ಅನುರಾಧ, ಅಯ್ಯಾಳಿ ತಿಮ್ಮಪ್ಪ, ಕವಿತಾ ಈಶ್ವರ್ ಸಿಂಗ್, ನಗರಸಭೆ ಸದಸ್ಯ ಬಿ. ಜೀವರತ್ನಂ ಹಾಜರಿದ್ದರು.
ರೋಡ್ ಶೋ (ಹೂವಿನಹಡಗಲಿ ವರದಿ):
‘ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಮಾ. 16 ರಂದು ಮಧ್ಯಾಹ್ನ ಪಟ್ಟಣದಲ್ಲಿ ಪಕ್ಷದ ಪ್ರಮುಖ ಮುಖಂಡರು ರೋಡ್ ಶೋ ನಡೆಸುವರು. ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ತೇರು ಹನುಮಪ್ಪ ದೇಗುಲದ ವರೆಗೆ ರೋಡ್ ಶೋ ನಡೆಯುಲಿದೆ’ ಎಂದು ಮಾಜಿ ಶಾಸಕ ಬಿ.ಚಂದ್ರನಾಯ್ಕ, ಮಂಡಲ ಅಧ್ಯಕ್ಷ ಎಸ್.ಸಂಜೀವರೆಡ್ಡಿ ತಿಳಿಸಿದರು. ಮುಖಂಡರಾದ ಎಚ್.ಹನುಮಂತಪ್ಪ, ಓದೋ ಗಂಗಪ್ಪ, ಬಿ.ರಾಮನಾಯ್ಕ, ಎಸ್.ದೂದನಾಯ್ಕ, ಎಲ್.ಮಧುನಾಯ್ಕ, ಶಿವಪುರ ಸುರೇಶ, ಈಟಿ ಲಿಂಗರಾಜ, ಜೆ.ಪರಶುರಾಮ, ಕರೆಂಗಿ ಸುಭಾಶ್ಚಂದ್ರ, ಕೆ.ಪ್ರಹ್ಲಾದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಬೈಕ್ ರ್‍ಯಾಲಿ (ಹರಪನಹಳ್ಳಿ ವರದಿ): ‘ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಮಾ. 16ರಂದು ನಗರದಲ್ಲಿ ಬೈಕ್ ರ್‍ಯಾಲಿ ನಡೆಸಲಾಗುವುದು. ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ 25 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಾಲ್ಲೂಕಿನ 257 ಮತಗಟ್ಟೆಗಳಲ್ಲಿ 8 ಮಹಾಶಕ್ತಿ ಕೇಂದ್ರ, 52 ಶಕ್ತಿ ಕೇಂದ್ರಗಳನ್ನು ರಚಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ 5 ಜನ ಪಂಚರತ್ನ ಕಾರ್ಯಕರ್ತರಿದ್ದಾರೆ. ಮತ್ತೊಮ್ಮೆ ಹರಪನಹಳ್ಳಿಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ’ ಯಾತ್ರೆಯ ಸಂಚಾಲಕ ಚಂದ್ರಶೇಖರ ಪೂಜಾರ್ ತಿಳಿಸಿದರು.
ಬಿಜೆಪಿ ಸಹಕಾರ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ ಜಿ.ನಂಜನಗೌಡ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೂರು ಹಾಲೇಶ್, ಮುತ್ತಿಗಿ ವಾಗೀಶ್, ಎಂ.ಪಿ.ನಾಯ್ಕ, ಮಲ್ಲಿಕಾರ್ಜುನ್, ಲಿಂಗಾನಂದ, ಉದಯ, ಎಂ.ಶಂಕರ್, ಮಂಜನಾಯ್ಕ, ಕಿರಣ್, ರೇಖಾ, ಓಂಕಾರಗೌಡ ಇತರರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.