ಹೊಸಪೇಟೆ: ಕಾರ್ ಹುಣ್ಣಿಮೆಯನ್ನು ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಸೋಮವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಎತ್ತು ಹಾಗೂ ಚಕ್ಕಡಿಯನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ, ಅದಕ್ಕೆ ಪೂಜೆ ನೆರವೇರಿಸಿ ಮೆರವಣಿಗೆ ಮಾಡಿದರು. ಇಲ್ಲಿನ ಎತ್ತಿನ ಬಂಡಿ ಯುವಕರ ಸಂಘವು ಸೋಮವಾರ ಸಂಜೆ ನಗರದಲ್ಲಿ ಎತ್ತಿನ ಬಂಡಿ ಓಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಎ.ಪಿ.ಎಂ.ಸಿ.ಯಿಂದ ಆರಂಭಗೊಂಡ ಮೆರವಣಿಗೆಯು ವಾಲ್ಮೀಕಿ ವೃತ್ತ, ಏಳುಕೇರಿಗಳ ಮೂಲಕ ಹಾದು ಮಾರುಕಟ್ಟೆ ಬಳಿ ಕೊನೆಗೊಂಡಿತು.

ಯುವಕರು, ವಯಸ್ಕರು ಸಂಭ್ರಮದಿಂದ ಚಕ್ಕಡಿ ಓಡಿಸಿ ಸಂಭ್ರಮಿಸಿದರು. ಚಿಣ್ಣರು ಬಲೂನ್‌ಗಳನ್ನು ಹಿಡಿದುಕೊಂಡು ಚಕ್ಕಡಿಯಲ್ಲಿ ಕುಳಿತಿದ್ದರು. ಚಕ್ಕಡಿಗಳು ಸಾಲಾಗಿ ಹೋಗುತ್ತಿರುವುದನ್ನು ನೋಡಿ ಸಾರ್ವಜನಿಕರು ಮೊಬೈಲ್‌ಗಳಲ್ಲಿ ಚಿತ್ರ ಸೆರೆ ಹಿಡಿದರು.

ತಾಲ್ಲೂಕಿನ ಹೊಸೂರು, ಮಲಪನಗುಡಿ, ಬೈಲುವದ್ದಿಗೇರಿ, ಧರ್ಮಸಾಗರ ಸೇರಿದಂತೆ ಹಲವೆಡೆ ಕಾರ್ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.