ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಡೂರು | ಅದಿರು ಲಾರಿಗಳ ಡಿಕ್ಕಿ; ಸಂಚಾರ ವ್ಯತ್ಯಯ

Published : 27 ಆಗಸ್ಟ್ 2024, 16:15 IST
Last Updated : 27 ಆಗಸ್ಟ್ 2024, 16:15 IST
ಫಾಲೋ ಮಾಡಿ
Comments

ಸಂಡೂರು: ಇಲ್ಲಿನ ತಾರಾನಗರ ಜಲಾಶಯದ ಬಳಿಯ ವ್ಯಾಲಿ ರೆಸಾರ್ಟ್ ಮುಂಭಾಗದಲ್ಲಿ ಮಂಗಳವಾರ ಮಧ್ಯಾಹ್ನ 3.30ರ‌ ಸುಮಾರಿಗೆ ಎರಡು ಅದಿರು ಲಾರಿಗಳು ಡಿಕ್ಕಿಹೊಡೆದುಕೊಂಡ ಪರಿಣಾಮ ಕಿಲೊಮೀಟರ್ ವರೆಗೂ ಸಂಚಾರ ವ್ಯತ್ಯಯ ಉಂಟಾಯಿತು.

112 ಸಿಬ್ಬಂದಿ ಹಾಗೂ ಪೊಲೀಸರು ಲಾರಿಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

‘ಅಪಘಾತ ಸಂಭವಿಸಿದ ನಂತರ ಎರಡೂ ಲಾರಿಯ ಚಾಲಕರು ಮತ್ತು ಸಹಾಯಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಇವು ಸುಶೀಲಾನಗರ ಮತ್ತು ಬಳ್ಳಾರಿಯ ನಿವಾಸಿಗಳ ಲಾರಿಗಳೆಂದು ತಿಳಿದು ಬಂದಿದೆ. ಮಾಲೀಕರ ಖಚಿತ ಮಾಹಿತಿ ದೊರೆತ ನಂತರ ಕ್ರಮವಹಿಸಲಾಗುವುದು’ ಎಂದು ಸಂಡೂರು ಪಿಎಸ್‌ಐ ವೀರೇಶ್ ಮಾಳಶೆಟ್ಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT