ಸಿರಗುಪ್ಪ: ದಸ್ತಗಿರಿ ವಾರೆಂಟ್ ಹೊಂದಿದ್ದ ತೀರ್ಪು ಋಣಿದಾರ ಆರೋಪಿಯೊಬ್ಬ ನಗರದ ಜೆಎಂಎಫ್ಸಿ ನ್ಯಾಯಾಲಯದ ಆವರಣದಿಂದ ಬುಧವಾರ ಪರಾರಿಯಾಗಿದ್ದಾನೆ.

2022ರ ಪ್ರಕರಣವೊಂದರಲ್ಲಿ ತೀರ್ಪು ಋಣಿದಾರ ಆರೋಪಿ-3 ಆಗಿದ್ದ ಸಿಂಧನೂರು ನಗರದ ನಿವಾಸಿ ಉಮೇಶ ಪರಾರಿಯಾದ ಆರೋಪಿ.

ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಲಯ ದಸ್ತಗಿರಿ ವಾರೆಂಟ್ ಹೊರಡಿಸಿದ್ದರಿಂದ ಉಮೇಶ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ನ್ಯಾಯಾಲಯದ ಬೇಲೀಫ್ ಗಾಧಿಲಿಂಗ ಅವರು ಉಮೇಶ್ನನ್ನು ನ್ಯಾಯಾಲಯಕ್ಕೆ ಕರೆತಂದಿದ್ದರು. ಉಮೇಶ್ನ ಕೈಕಾಲುಗಳಿಗೆ ಆಗಿರುವ ತರಚಿದ ಗಾಯಗಳನ್ನು ನೋಡಿದ ನ್ಯಾಯಾಧೀಶರು, ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ತಿಳಿಸಿದ್ದರು.

ಚಿಕಿತ್ಸೆ ನಂತರ ನ್ಯಾಯಾಲಯದ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಉಮೇಶ್ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎಂದು ನ್ಯಾಯಾಲಯದ ಬೇಲೀಫ್ ಕೆ.ಗಾದಿಲಿಂಗ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.