ಹೊಸಪೇಟೆ: ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ.

ಸೋಮವಾರ ಒಂದೇ ದಿನ 20 ಜನರಲ್ಲಿ ಕೋವಿಡ್–19 ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಭಾನುವಾರ ಆರು ಜನರಿಗೆ ಸೋಂಕು ತಗುಲಿತ್ತು. ಈಗಾಗಲೇ 14 ಜನ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 29 ಇದೆ.

ಸೋಮವಾರ ದೃಢಪಟ್ಟ 20 ಸೋಂಕಿತರಲ್ಲಿ 16 ಜನ ನಗರಕ್ಕೆ ಸೇರಿದರೆ, ಇನ್ನುಳಿದ ನಾಲ್ವರು ಗ್ರಾಮೀಣ ಪ್ರದೇಶದವರು. ತಾಲ್ಲೂಕಿನ ಕಮಲಾಪುರ, ಭುವನಹಳ್ಳಿ, ಹನುಮನಹಳ್ಳಿ ಹಾಗೂ ಡಣಾಪುರ ಗ್ರಾಮದಲ್ಲಿ ತಲಾ ಒಬ್ಬರಲ್ಲಿ ಸೋಂಕಿರುವುದು ಖಚಿತವಾಗಿದೆ.

‘ಸೋಂಕಿತರೆಲ್ಲ ಜೆ.ಎಸ್.ಡಬ್ಲ್ಯೂ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರು’ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.