ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಟುಂಬಸ್ಥರು, ವಕೀಲರಿಂದ ದರ್ಶನ್‌ ಭೇಟಿ

Published : 12 ಸೆಪ್ಟೆಂಬರ್ 2024, 16:19 IST
Last Updated : 12 ಸೆಪ್ಟೆಂಬರ್ 2024, 16:19 IST
ಫಾಲೋ ಮಾಡಿ
Comments

ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಅವರನ್ನು ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್‌ ಮತ್ತು ವಕೀಲರು ಇಲ್ಲಿನ ಕಾರಾಗೃಹದಲ್ಲಿ ಗುರುವಾರ ಭೇಟಿಯಾಗಿ,  ಅರ್ಧಗಂಟೆ ಚರ್ಚಿಸಿದರು.

ಮಧ್ಯಾಹ್ನ 12.30 ರಿಂದ 1ಗಂಟೆಯವರೆಗೆ ಭೇಟಿಯಾಯಿತು. ವಿಶೇಷ ಭದ್ರತಾ ಕೊಠಡಿಯಿಂದ ಬರುವಾಗ ಮತ್ತು ಮರಳುವಾಗ ದರ್ಶನ್‌ ಕೈಯಲ್ಲಿ ಎರಡು ಚೀಲಗಳಿದ್ದವು.

ಗುವಾಹಟಿಯ ಕಾಮಾಕ್ಯ ದೇವಸ್ಥಾನದಿಂದ ತರಲಾಗಿದ್ದ ಪ್ರಸಾದವನ್ನು ದರ್ಶನ್‌ ಅವರಿಗೆ ಪತ್ನಿ ವಿಜಯಲಕ್ಷ್ಮೀ ನೀಡಿದರು ಎನ್ನಲಾಗಿದೆ. ಅದು ಖಚಿತವಾಗಿಲ್ಲ.  

‘ದೋಷಾರೋಪ ಪಟ್ಟಿ ಮತ್ತು ಕಾನೂನು ಹೋರಾಟದ ಬಗ್ಗೆ ಚರ್ಚಿಸಿದೆವು. ಹಿರಿಯ ವಕೀಲರ ಜೊತೆ ಚರ್ಚಿಸಿ, ಜಾಮೀನು ಅರ್ಜಿ ಸಲ್ಲಿಕೆ ಕುರಿತು ತೀರ್ಮಾನಿಸುತ್ತೇವೆ’ ಎಂದು ಅವರ ವಕೀಲರು ತಿಳಿಸಿದರು.

ಮಾಧ್ಯಮಗಳಿಗೆ ಬೆರಳು:

ವಕೀಲರ ಭೇಟಿಗೆ ಮಧ್ಯಾಹ್ನ 4.15ಕ್ಕೆ ವಿಶೇಷ ಭದ್ರತಾ ಕೊಠಡಿಯಿಂದ ಜೈಲಿನ ಸಂದರ್ಶಕರ ಕೊಠಡಿಗೆ ನಡೆದು ಹೋಗುತ್ತಿದ್ದ ದರ್ಶನ್‌, ಕಾರಾಗೃಹದ ಗೇಟು ಬಳಿ ನಿಂತಿದ್ದ ಮಾಧ್ಯಮದವರನ್ನು ಕಂಡು ಮಧ್ಯದ ಬೆರಳು ಪ್ರದರ್ಶಿಸಿದರು. ಕೊಠಡಿಗೆ ಮರಳುವಾಗಲೂ ಅವರು ಮಧ್ಯದ ಬೆರಳನ್ನು ಪ್ರದರ್ಶಿಸಿದರು. ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT