ಜಿಲ್ಲೆಯಲ್ಲಿ 15 ವರ್ಷಗಳಿಂದಲೂ ಕುಂಟುತ್ತಿರುವ ಕಾಮಗಾರಿಗಳಿವೆ. ವಿಮ್ಸ್‌ನ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಹೆಸರಿಗೆ ಎಂಬಂತೆ ಆರಂಭಿಸಲಾಗಿದೆ. ಜಿಲ್ಲೆಯ ರಸ್ತೆಗಳು ಗುಂಡಿಬಿದ್ದಿವೆ. ಮಂತ್ರಿಗಳು ಇವುಗಳತ್ತ ಗಮನಹರಿಸಿ ಪರಿಹಾರ ಸೂಚಿಸಬೇಕು.
ರೆಕ್ಕಲ ವೆಂಕಟರೆಡ್ಡಿ ಸಾಮಾಜಿಕ ಕಾರ್ಯಕರ್ತ
‘ಕಾಟಾಚಾರದ ಸಭೆ ಆಗದಿರಲಿ’
ಹಿಂದೆಲ್ಲ ಕೆಡಿಪಿ ಸಭೆಗಳು ಬೆಳಗ್ಗೆ ಆರಂಭವಾದರೆ ಸಂಜೆ ವರೆಗೆ ನಡೆಯುತ್ತಿದ್ದವು. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ ಪ್ರಕಾಶ ಮಾಜಿ ಸಚಿವ ಎಂ.ವೈ ಗೋರ್ಪಡೆ ಜನರ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬಂದು ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಿದ್ದರು. ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿದ್ದರು. ಆದರೆ ಈಗ ಸಭೆಗಳು ನಿಯಮಿತವಾಗಿ ನಡೆಯುತ್ತಲೂ ಇಲ್ಲ. ನಡೆದರೆ ಕೆಲವೇ ಗಂಟೆಗಳಿಗೆ ಮಾತ್ರವೇ ಸೀಮಿತವಾಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಶಾಸ್ತ್ರಕ್ಕೆಂಬಂತೆ ಸಭೆಗಳು ಆಗದಿರಲಿ. ಸಭೆಯ ನಿಜ ಉದ್ದೇಶ ಈಡೇರಲಿ ಎಂಬ ಮಾತುಗಳು ಪ್ರಜ್ಞಾವಂತ ನಾಗರಿಕರಿಂದ ಕೇಳಿಬಂದಿವೆ.