ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ತನ್ನ ಅಭ್ಯರ್ಥಿಯನ್ನಾಗಿ ಸಂಡೂರು ಶಾಸಕ ಇ. ತುಕಾರಾಮ್ ಅವರನ್ನು ಕಾಂಗ್ರೆಸ್ ಶುಕ್ರವಾರ ಅಧಿಕೃತವಾಗಿ ಘೋಷಿಸಿದೆ.

ಹತ್ತು ದಿನಗಳ ಹಿಂದೆಯೇ ತುಕಾರಾಮ್ ಅವರ ಹೆಸರನ್ನು ಕಾಂಗ್ರೆಸ್ ಅಖೈರುಗೊಳಿಸಿತ್ತಾದರೂ, ಘೋಷಣೆಯನ್ನು ತಡವಾಗಿ ಮಾಡಿದೆ.

ತುಕಾರಾಮ್ ಅವರು ಈ ಮೊದಲು ತಮ್ಮ ಪುತ್ರಿ ಚೈತನ್ಯಾ (ಸೌಪರ್ಣಿಕಾ)ಗೆ ಟಿಕೆಟ್ ಕೇಳಿದ್ದರು. ಪಕ್ಷದ ನಾಯಕರು ಅದಕ್ಕೆ ಒಪ್ಪಿರಲಿಲ್ಲ. ನೀವೇ ನಿಲ್ಲಿ ಎಂದು ಅವರಿಗೆ ಸೂಚಿಸಿದ್ದರು.

ತುಕಾರಾಮ್ ಅವರು 2008ರಿಂದಲೂ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. 2018ರಲ್ಲಿ ಅವರು ಕಾಂಗ್ರೆಸ್– ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅಲ್ಪಾವಧಿಗೆ ಸಚಿವರಾಗಿದ್ದರು.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ತುಕಾರಾಮ್ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.