ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿ: ಶ್ರದ್ಧಾ ಭಕ್ತಿಯಿಂದ ಈದ್ ಉಲ್ ಫಿತ್ರ್ ಆಚರಣೆ

Published 11 ಏಪ್ರಿಲ್ 2024, 16:10 IST
Last Updated 11 ಏಪ್ರಿಲ್ 2024, 16:10 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ಗುರುವಾರ ಸಂಭ್ರಮ, ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಸತತ ಒಂದು ತಿಂಗಳಿನಿಂದ ಕೈಗೊಂಡಿದ್ದ ಉಪವಾಸ ವ್ರತವನ್ನು ಪ್ರಾರ್ಥನೆ ಮೂಲಕ ಮುಕ್ತಾಯ ಮಾಡಿದರು. ಕೂಡ್ಲಿಗಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿದ್ದ ಸಾವಿರಾರು ಸಂಖ್ಯೆಯ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಕೈಗೊಂಡನಂತರ ಪರಸ್ಪರರು ಅಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ಮೌಲಾನಾ ಶೋಯೆಬ್ ಆಲಂ ನವಾಜ್ ಪ್ರಾರ್ಥನೆ ಬೋಧಿಸಿದರು.

ಅಖಾನಿಯ ಮೊಮ್ಮಿನ್ ಮಸೀದಿಯ ಮುತಾವತಿ ಸೈಯದ್ ನಜೀರ್ ಸಾಹೇಬ್, ಕಾರ್ಯದರ್ಶಿ ಎಣ್ಣೆ ಭಾಷಾ, ಜಾಮೀಯ ಮಸೀದಿ ಮುತಾವಲಿ ಟಿ.ಕಾಸೀಂ ಸಾಹೇಬ್ ಮತ್ತಿತರರು ಇದ್ದರು.

ಹಳೆ ಊರಿನ ತಂಬ್ರಹಳ್ಳಿ ರಸ್ತೆಯಲ್ಲಿರುವ ಮುಫ್ತಿ ನೂರಾನಿ ಮಸೀದಿಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು ನೆರೆದಿದ್ದ ಎಲ್ಲರೂ ಪರಸ್ಪರ ಶುಭಾಶಯ ಕೋರಿದರು.

ತಾಲ್ಲೂಕಿನ ಹಂಪಸಾಗರ, ತಂಬ್ರಹಳ್ಳಿ, ಹಂಪಾಪಟ್ಟಣ, ಹನಸಿ, ಬಲ್ಲಾಹುಣ್ಸಿ, ನಂದಿಪುರ, ಮಾಲವಿ, ಕೋಗಳಿ, ನಾರಾಯಣದೇವರಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT