ಕುರುಗೋಡು: ಇಲ್ಲಿನ ರೈತ ಜಿ.ಕಾಶಿನಾಥ ರಾವ್ (42) ಎಂಬವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಮುದ್ದಟನೂರು ಕ್ಯಾಂಪ್ನಲ್ಲಿ ಜರುಗಿದೆ.

ಜೂನ್ 30ರಂದು ರಾತ್ರಿ ಮನೆಯಲ್ಲಿ ಅವರು ಕ್ರಿಮಿನಾಶಕ ಸೇವಿಸಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದರು. ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಜುಲೈ 2ರಂದು ಮೃತಪಟ್ಟಿದ್ದಾರೆ.

‘ಮದ್ದಟನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹3.55 ಲಕ್ಷ ಕೃಷಿ ಸಾಲ, ₹2.50ಲಕ್ಷ ಕ್ರಿಮಿನಾಶಕ ಮತ್ತು ರಸಗೊಬ್ಬರ ಸಾಲ, ಸ್ನೇಹಿತಬಳಿ ₹6.34 ಲಕ್ಷ ಕೈಸಾಲ ಸೇರಿ ಒಟ್ಟು ₹12.39 ಲಕ್ಷ ಸಾಲ ಮಾಡಿಕೊಂಡಿದ್ದರು’ ಎಂದು ಮೃತ ರೈತನ ತಾಯಿ ಜಿ.ವೆಂಕಟಲಕ್ಷ್ಮಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.