ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ನಾಲ್ಕು ಹೊಸ ಬಸ್‌ಗಳಿಗೆ ಚಾಲನೆ

Published : 6 ಸೆಪ್ಟೆಂಬರ್ 2024, 15:27 IST
Last Updated : 6 ಸೆಪ್ಟೆಂಬರ್ 2024, 15:27 IST
ಫಾಲೋ ಮಾಡಿ
Comments

ಬಳ್ಳಾರಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕೆಕೆಎಸ್‌ಆರ್‌ಟಿಸಿಯ ಬಳ್ಳಾರಿ ವಿಭಾಗಕ್ಕೆ ನಾಲ್ಕು ಬಸ್‌ಗಳು ಲಭ್ಯವಾಗಿದ್ದು, ಶುಕ್ರವಾರ ಶಾಸಕ ನಾರಾ ಭರತ್‌ ರೆಡ್ಡಿ ಚಾಲನೆ ನೀಡಿದರು. 

ನಾಲ್ಕು ಬಸ್‌ಗಳು ಅತ್ಯಾಧುನಿಕ ವಿನ್ಯಾಸ ಹೊಂದಿರುವುದಾಗಿ ವಿಭಾಗೀಯ ನಿಯಂತ್ರಕ ಇನಾಯತ್‌ ಬಾಗಬಾನ್‌ ತಿಳಿಸಿದರು. 

‘ಬಸ್‌ನಲ್ಲಿ ನಾಲ್ಕು ಕ್ಯಾಮೆರಾಗಳಿವೆ. ನ್ಯುಮ್ಯಾಟಿಕ್ ಡೋರ್ ಅಳವಡಿಸಲಾಗಿದೆ. ಮೈಕ್, ಚಾರ್ಜರ್‌, ಮುಂದಿನ ಆಸನಗಳಲ್ಲಿ ಕುಳಿತುಕೊಳ್ಳುವವರಿಗೆ ಸೀಟ್ ಬೆಲ್ಟ್ ಇದೆ. ಎಫ್ಎಂ ಕೂಡ ಇದೆ’ ಎಂದು ಬಳ್ಳಾರಿ ವಿಭಾಗದ ಸಂಚಾರ ನಿಯಂತ್ರಕ ಚಾಮರಾಜ್‌ ಮಾಹಿತಿ ನೀಡಿದರು. 

ಸದ್ಯ ನಾಲ್ಕು ಬಸ್‌ಗಳನ್ನು ನಾಲ್ಕು ವಿವಿಧ ಮಾರ್ಗಗಳಿಗೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಹೊಸಪೇಟೆ, ಹುಬ್ಬಳ್ಳಿ, ಬೆಳಗಾವಿ ಮತ್ತು ಬೆಂಗಳೂರು ಮಾರ್ಗವಾಗಿ ಬಸ್‌ಗಳು ಪ್ರಯಾಣಿಕರಿಗೆ ಸೇವೆ ನೀಡಲಿವೆ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT